ಹಬ್ಬಗಳ ನೆಪದಲ್ಲಿ ನಡೆಯುವ ಆಫರ್ ನೆಪದ ಆನಲೈನ್ ವ್ಯಾಪರದಲ್ಲಿ ಎಚ್ಚರ ವಹಿಸುವುದು ಒಳಿತು ಇಲ್ಲವಾದರೆ ನಷ್ಟ ಕಟ್ಟಿಟ್ಟ ಬುತ್ತಿ. ಅವಸರವೇ ಅಪಾಯಕ್ಕೆ ಕಾರಣ ಎಂಬ ಗಾದೆ ಮಾತಿದೆ. ಆನ್ಲೈನ್ ಶಾಪಿಂಗ್ ವಿಚಾರದಲ್ಲೂ ಇದು ಅನ್ವಯ. ಹೌದು, ಸ್ವಲ್ಪ ಯಾಮಾರಿದ್ರೂ ಸಾಕು ನಮ್ಮ ಹಣ ಮಂಗಮಾಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಇಲ್ಲಿವೆ ಸಲಹೆಗಳು
– ಆಫರ್ಗಳನ್ನು ಎರಡು ಬಾರಿ ಪರಿಶೀಲಿಸಿದ ನಂತರವೇ ಖರೀದಿ ನಿರ್ಧಾರ ತೆಗೆದುಕೊಳ್ಳಬೇಕು. ಮೋಸ ಹೋಗಿರುವುದು ಕಂಡುಬಂದಲ್ಲಿ ಕೂಡಲೇ ಬ್ಯಾಂಕ್ ಹಾಗೂ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ.
-ವಿಶೇಷವಾಗಿ, ಸೀಮಿತ ಸಮಯದ ಕೊಡುಗೆಗಳ ಸಂದೇಶಗಳನ್ನು ನಿರ್ಲಕ್ಷಿಸಿ.
– ಮೋಸದ ಇಮೇಲ್ಗಳು ಕಂಪನಿಯ ಹೆಸರುಗಳಲ್ಲಿ ಮುದ್ರಣದೋಷಗಳನ್ನು ಹೊಂದಿರುತ್ತವೆ. ಇವುಗಳನ್ನು ಸ್ವಲ್ಪ ಕಾಳಜಿಯಿಂದ ಗುರುತಿಸಬೇಕು ಅಷ್ಟೇ.
-ಪಾವತಿಗಳಿಗೆ ಬಂದಾಗ, ಎರಡು ಅಂಶದ ದೃಢೀಕರಣವನ್ನು ಬಳಸಬೇಕು. ಇದು ಹೆಚ್ಚುವರಿ ರಕ್ಷಣೆ ಒದಗಿಸುತ್ತದೆ.
– ಸೈಬರ್ ಕಳ್ಳರು ತಂತ್ರಜ್ಞಾನದ ಮೂಲಕ ಹೊಸ ರೀತಿಯಲ್ಲಿ ಅಮಾಯಕರ ಹಣ ದೋಚಲು ಯತ್ನಿಸುತ್ತಾರೆ. ಹೀಗಾಗಿ ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಎಚ್ಚರ ವಹಿಸುವಂತೆ ಆಗಾಗ್ಗೆ ಪೊಲೀಸರು ಕೂಡಾ ಸೂಚನೆ ನೀಡುತ್ತಲೇ ಇರುತ್ತಾರೆ.