Ad imageAd image

ನವರಾತರಿ 6 ನೇ ದಿನ; ಕಾತ್ಯಾಯನಿ ಪೂಜೆ

Hubballi Dhwani
ನವರಾತರಿ 6 ನೇ ದಿನ; ಕಾತ್ಯಾಯನಿ  ಪೂಜೆ
WhatsApp Group Join Now
Telegram Group Join Now

ಶಾರದೀಯ ನವರಾತ್ರಿ 2024 ರ ಆರನೇ ದಿನವು ಅಕ್ಟೋಬರ್‌ 8 ರಂದು ಮಂಗಳವಾರ ಬಂದಿದೆ. ಈ ದಿನ ದುರ್ಗಾ ದೇವಿಯ ಆರನೇ ರೂಪವಾದ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುವುದು. 

ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಧರ್ಮ-ಅರ್ಥ-ಕಾಮ್ಯ-ಮೋಕ್ಷ ಹೀಗೆ ಚತುರ್ವಿಧ ಫಲ ಪುರುಷಾರ್ಥಗಳು ಸಹ ದೊರೆಯುತ್ತವೆ. ರೋಗ, ಶೋಕ, ದುಃಖ, ದಾರಿದ್ರ್ಯಗಳು ದೂರವಾಗುತ್ತವೆ. ಇಹ ಲೋಕದಲ್ಲಿ ದೇವಿಯ ಆರಾಧಕರು ಅಲೌಕಿಕವಾದ ತೇಜಸ್ಸು, ಕಾಂತಿ, ಸಮಾಧಾನ- ಸಂತೃಪ್ತಿಯನ್ನು ಕಾಣಬಹುದು.

ಆ ಜಗಜ್ಜನನಿಗೆ ಕಾತ್ಯಾಯಿನಿ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಹಿನ್ನೆಲೆ ಇದೆ. ಕತ ಎಂಬ ಋಷಿ ಇದ್ದರು. ಅವರ ಮಗನ ಹೆಸರು ಕಾತ್ಯ. ಇದೇ ಕಾತ್ಯ ಋಷಿಯ ಗೋತ್ರದಲ್ಲಿ ಜನಿಸಿದವರು ಕಾತ್ಯಾಯನ. ಆ ಭಗವತಿಯು ತಮ್ಮ ಮನೆಯಲ್ಲಿ ಮಗಳಾಗಿ ಹುಟ್ಟಬೇಕು ಎಂಬ ಅಭೀಷ್ಟದಿಂದ ಅವರು ಕಠಿಣವಾದ ತಪಸ್ಸು ಮಾಡಿದರು. ಪ್ರಾರ್ಥನೆಯನ್ನು ಆ ದೇವಿಯ ನಡೆಸಿಕೊಟ್ಟಳು. ಕೆಲ ಸಮಯದ ನಂತರ ರಾಕ್ಷಸನಾದ ಮಹಿಷಾಸುರನ ಉಪಟಳವು ವಿಪರೀತ ಹೆಚ್ಚಾಯಿತು. ಆಗ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಹಾಗೂ ಎಲ್ಲ ದೇವತೆಗಳು ಸೇರಿ, ತಂತಮ್ಮ ತೇಜಶ್ಶಕ್ತಿಯ ಅಂಶವನ್ನು ನೀಡಿ, ಒಬ್ಬ ದೇವಿಯನ್ನು ಸೃಷ್ಟಿ ಮಾಡಿದರು. ಆಕೆಯು ಮಹಿಷಾಸುರನ ಸಂಹಾರಕ್ಕಾಗಿಯೇ ಸೃಷ್ಟಿಯಾದವಳು. ಋಷಿಗಳಾದ ಕಾತ್ಯಾಯನರು ಈ ದೇವಿಯ ಪೂಜೆಯನ್ನು ಮೊದಲಿಗೆ ಮಾಡಿದರು. ಆ ಕಾರಣದಿಂದ ಆಕೆಗೆ ಕಾತ್ಯಾಯಿನಿ ಎಂಬ ಹೆಸರು ಬಂತು.

ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಧರ್ಮ-ಅರ್ಥ-ಕಾಮ್ಯ-ಮೋಕ್ಷ ಹೀಗೆ ಚತುರ್ವಿಧ ಫಲ ಪುರುಷಾರ್ಥಗಳು ಸಹ ದೊರೆಯುತ್ತವೆ. ರೋಗ, ಶೋಕ, ದುಃಖ, ದಾರಿದ್ರ್ಯಗಳು ದೂರವಾಗುತ್ತವೆ. ಜನ್ಮಜನ್ಮಾಂತರದ ಪಾಪಗಳು ನಾಶ ಆಗುತ್ತವೆ. ಇಹ ಲೋಕದಲ್ಲಿ ದೇವಿಯ ಆರಾಧಕರು ಅಲೌಕಿಕವಾದ ತೇಜಸ್ಸು, ಕಾಂತಿ, ಸಮಾಧಾನ- ಸಂತೃಪ್ತಿಯನ್ನು ಕಾಣಬಹುದು.

 

ಕಾತ್ಯಾಯಿನಿ ದೇವಿಯನ್ನು ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್ | ಪಾತು ನ: ಸರ್ವಭೀತಿಭ್ಯ: ಕಾತ್ಯಾಯನಿ ನಮೋಸ್ತುತೇ- ಹೀಗೆ ಸಹ ಆರಾಧಿಸಲಾಗುತ್ತದೆ. ಆ ದೇವಿಯ ಆರಾಧನೆಯಿಂದಾಗಿ ಭಯ ದೂರವಾಗಿ ಧೈರ್ಯ ಜೊತೆಯಾಗುತ್ತದೆ, ಏನನ್ನಾದರೂ ಸಾಧಿಸುವ ಅಚಲ ವಿಶ್ವಾಸ ಸಹ ಮೂಡುತ್ತದೆ.

WhatsApp Group Join Now
Telegram Group Join Now
Share This Article
error: Content is protected !!