ಮೊಬೈಲ್ ನೋಡುತ್ತ ಕುಳಿತ ಸ್ಟೇಷನ್ ಮಾಸ್ಟರ್; ಆಟೋಗೆ ರೈಲು ಡಿಕ್ಕಿ, ಮೂವರಿಗೆ ಗಂಭೀರ ಗಾಯ
ಮೈಸೂರು: ಮೊಬೈಲ್ ನಲ್ಲಿ ಸೆ್ಷೇಷನ್
ಮಾಸ್ಟರ್ ಮಗ್ನನಾಗಿದ್ದರಿಂದ ರೈಲ್ವೆ ಆಟೋಗೆ ಡಿಕ್ಕಿ ಹೊಡೆದು ಮೂವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
ಮೈಸೂರಿನ ಇಲವಾಲ ಹೋಬಳಿಯ ಮಲ್ಲೇಗೌಡನ ಕೊಪ್ಪಲು ಗ್ರಾಮದ ರೈಲ್ವೆ ಗೇಟ್ ಬಳಿ ದುರ್ಘಟನೆ ನಡೆದಿದೆ.
ಸ್ಟೇಷನ್ ಮಾಸ್ಟರ್ ಗೇಟ್ ಹಾಕಬೇಕಿತ್ತು. ಮೊಬೈಲ್ನಲ್ಲಿ ಸ್ಟೇಷನ್ ಮಾಸ್ಟರ್ ಮಗ್ನನಾಗಿ ಗೇಟ್ ಹಾಕುವುದನ್ನೇ ಮರೆತು ಬಿಟ್ಟಿದ್ದಾನೆ. ಹೀಗಾಗಿ ರೈಲು ಬರುವುದನ್ನು ಗಮನಿಸಿದೇ ತನ್ನೆರಡು ಮಕ್ಕಳೊಂದಿಗೆ ತಂದೆ ಗೂಡ್ಸ್ ಆಟೊದಲ್ಲಿ ಹಳಿ ದಾಟಲು ಮುಂದಾಗಿದ್ದಾರೆ. ಆಗ ವೇಗವಾಗಿ ಬಂದ ರೈಲು ಆಟೊಗೆ ಡಿಕ್ಕಿಯಾಗಿದೆ. ಇದರಿಂದ ಆಟೊದಲ್ಲಿದ್ದ ತಂದೆ ಹಾಗೂ 9, 5 ವರ್ಷದ ಎರಡು ಮಕ್ಕಳು ಗಾಯಗೊಂಡಿದ್ದಾರೆ.