ಗಮನ ಸೆಳೆದ ಬೃಹತ್ ಜಾಥಾ
ಕಲಘಟಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಮಹಾತ್ಮಾ ಗಾಂಧಿ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಸೋಮವಾರ ಗಾಂಧಿ ಸ್ಮೃತಿ, ಬೃಹತ್ ಜಾಥಾ ನಡೆಯಿತು.
ಬೆಳಗ್ಗೆ ಪಟ್ಟಣದ ಯುವಶಕ್ತಿ ಸರ್ಕಲ್‌ನಲ್ಲಿ ಜಾಥಾಗೆ ಹಿರಿಯ ನ್ಯಾಯಾಧೀಶ ರವೀಂದ್ರ ಹೊನೋಲೆ ಚಾಲನೆ ನೀಡಿದರು. ಜಾಥಾ ಬಾಲಮಾರುತಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿಗುಂಟ ಎಪಿಎಂಸಿ ಎದುರಿಗೆ ಬೆಂಡಿಗೇರಿ ಓಣಿ ಮಾರ್ಗವಾಗಿ ಚೌತಮನಿಕಟ್ಟೆಯಿಂದ ಬಸವೇಶ್ವರ ಕಲ್ಯಾಣ ಮಂಟಪ ತಲುಪಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಿವಾಣಿ ನ್ಯಾಯಾಧೀಶ ಗಣೇಶ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ, ಪಪಂ ಅಧ್ಯಕ್ಷೆ ಶಿಲ್ಪಾ ಪಾಲ್ಕರ, ಸಿಪಿಐ ಶ್ರೀಶೈಲ ಕೌಜಲಗಿ, ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪ್ರಭಾಕರ ನಾಯಕ, ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ಯೋಜನಾಧಿಕಾರಿ ಪ್ರಶಾಂತ ನಾಯ್ಕ, ನಿವೃತ್ತ ಅಧಿಕಾರಿ ಎಂ.ಆರ್. ತೋಟಗಂಟಿ, ಬಸವೇಶ್ವರ ಕಲ್ಯಾಣ ಮಂಟಪದ ಆಡಳಿತ ಮಂಡಳಿ ಸದಸ್ಯ ಗಂಗಾಧರ ಗೌಳಿ, ಪ್ರಬಂಧಕರಾದ ಆನಂದ ನಾಯ್ಕ್, ಪ್ರಬಂಧಕರಾದ ದೀಪಾ, ಮೇಲ್ವಿಚಾರಕರಾದ ಮಂಜುನಾಥ್ ಬಾರ್ಕಿ, ಮಲ್ಲೇಶಪ್ಪ, ನಿಶ್ಚಿತ, ಪ್ರೇಮಾ ಗೌಡ, ಶಿಲ್ಪಾ ನಾಯಕ್, ಗೀತಾ, ಜ್ಯೋತಿ, ಬಸವರಾಜ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುನಿತಾ, ಕೃಷಿ ಮೇಲ್ವಿಚಾರಕರಾದ ಸಂತೋಷ ಸೇರಿದಂತೆ ಮತ್ತಿತರರು ಇದ್ದರು.