ಜೂ.30 ರವರೆಗೆ ಆಸ್ತಿ ತೆರಿಗೆ ಪಾವತಿಗೆ ಅವಕಾಶ
ಹುಬ್ಬಳ್ಳಿ ; ಪ್ರಸಕ್ತ ಆರ್ಥಿಕ ವರ್ಷ 2024-25 ನೇ ಸಾಲಿನ ಆಸ್ತಿ ತೆರಿಗೆಯನ್ನು ದಂಡವಿಲ್ಲದೇ ಸಂದಾಯಿಸಲು ಜೂನ್ 30ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಕೇವಲ ಎಚ್‌ಡಿ-1 (ಕರ್ನಾಟಕ ಒನ್ ಸೇವಾ ಕೇಂದ್ರಗಳು) ಅಥವಾ http://www.hdmc.in ವೆಬ್‌ಸೈಟ್ ಮೂಲಕ ಎಲ್ಲ ವಿಧದ ಆನ್‌ಲೈನ್ ಪಾವತಿ ವ್ಯವಸ್ಥೆಗಳ ಮುಖಾಂತರ ಆಸ್ತಿಕರ ಸಂದಾಯ ಮಾಡಲು ಅವಕಾಶವಿದೆ.
ಅಲ್ಲದೇ ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಪಾವತಿಸದಿದ್ದವರು ಸಹ ತಮ್ಮ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಬೇಕು. ಈಗಾಗಲೇ ಆಸ್ತಿ ತೆರಿಗೆ ರೆಜಿಸ್ಟರ್‌ನಲ್ಲಿ ದಾಖಲಿದ್ದ ಆಸ್ತಿಗಳನ್ನು ಹೊರತುಪಡಿಸಿ, ಹೊಸದಾಗಿ ರಚನೆಯಾದ ವಸತಿ ವಿನ್ಯಾಸ, ಅಪಾರ್ಟಮೆಂಟ್, ವಾಣಿಜ್ಯ, ಕೈಗಾರಿಕಾ, ಬಹುಮಹಡಿ ಕಟ್ಟಡ ಹಾಗೂ ಇತರೆ ವಿಧವಾದ ಕಟ್ಟಡಗಳು ದಾಖಲೆಯಾಗದೇ ಇದ್ದಲ್ಲಿ ಸಂಬಂಧಿಸಿದ ವಲಯ ಕಚೇರಿಗೆ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಪಿಐಡಿ ಸೃಜನೆ ಮಾಡಿಕೊಂಡು ಜೂನ್ 30 ರೊಳಗಾಗಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಆಸ್ತಿ ತೆರಿಗೆ ತುಂಬದೇ ಇದ್ದವರನ್ನು ಗುರುತುಪಡಿಸಿ ಹೆಚ್ಚಿನ ದಂಡವನ್ನು ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಿ ಪಾಲಿಕೆ ಕೈಗೊಳ್ಳಲಿರುವ ಅಭಿವೃದ್ಧಿ ಕೆಲಸಗಳಿಗೆ ಜವಾಬ್ದಾರಿಯುತ ಪಾಲುದಾರರಾಗಬೇಕು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****