ನೂಲ್ವಿ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಕ್ಕೆ ಮೆಚ್ಚುಗೆ
ಹುಬ್ಬಳ್ಳಿ: ತಾಲೂಕಿನ ನೂಲ್ವಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೇಂಟ್‌ನ ಡಿಪ್ಲೋಮಾ ಕೋ ಅಪರೇಟಿವ ಮ್ಯಾನೇಜಮೇಂಟ್‌ನ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಭೇಟಿ ನೀಡಿದರು.
ಧಾರವಾಡ ಜಿಲ್ಲೆಯಲ್ಲಿಯೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘದ ಕಾರ್ಯಕ್ಕೆ ಪ್ರಾಚಾರ್ಯ ವೆಂಕಟರಮಣನ್ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ತೆರೆದಿರುವ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆಗೂ ಚಾಲನೆ ನೀಡಲಾಯಿತು.
ಪ್ರಾಚಾರ್ಯ ವೆಂಕಟರಮಣ, ಸಹಶಿಕ್ಷಿಕ ರೂಪಾ ಪಾಟೀಲ, ಗೀತಾ, ಸಂಘದ ಅಧ್ಯಕ್ಷ ಮುತ್ತಮಗೌಡ ಪಾಟೀಲ, ಉಪಾಧ್ಯಕ್ಷ ಜಿ.ಎಸ್.ಜಿಡ್ಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಲ್ಲನಗೌಡ ಮೂಗಣ್ಣವರ ಸಹ ಸಿಬ್ಬಂದಿ ಹಾಗೂ ರೈತರು ಇದ್ದರು.