ಹ1ಬ್ಬಳ್ಳಿ: ಮೇ ೭ ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಎಸ್ ಎಸ್ ಕೆ ಸಮಾಜದಿಂದ ಶೇ ೧೦೦ರಷ್ಟು ಮತದಾನವಾಗುವಂತೆ ಮಾಡುವ ನಿರ್ಧಾರವನ್ನು ಹುಬ್ಬಳ್ಳಿ ಎಸ್ ಎಸ್ ಕೆ ಸಮಾಜ ಕೈಗೊಂಡಿದೆ.
ನಗರದ ಖಾಸಗಿ ಹೋಟೆಲವೊಂದರಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ ಮುಖಂಡರು ನಗರ ಭಾಗದಲ್ಲಿ ಮತದಾನ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಾಗುತ್ತಿದೆ. ಬಹುತೇಕರು ರಜೆಯ ನಿಮಿತ್ತ ಪ್ರವಾಸಕ್ಕೆ ತೆರಳುತ್ತಾರೆ. ಶಿಕ್ಷಣವಂತರು ಸಹಿತ ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲು ಎಲ್ಲರೂ ಒಮ್ಮತದಿಂದ ನಿರ್ಧಾರ ಕೈಗೊಂಡರು.
ಈ ಸಭೆಯಲ್ಲಿ ಬೆಂಗಳೂರಿನ ಖ್ಯಾತ ಉದ್ದಿಮೆದಾರರಾದ ಸ್ವಾಮಿಸಾ ಎಲ್. ಖೋಡೆ ಯವರ ಸುಪುತ್ರಿ ಮೀರಾ ಮೇಹರವಾಡೆ, ಪ್ರಮುಖರಾದ ಅಶೋಕ ಎಸ್. ಕಾಟವೆ, ಅಶೋಕ ಎಸ್. ಹಬೀಬ, ಭಾಸ್ಕರ ಜಿತೂರಿ, ನೀಲಕಂಠ ಜಡಿ, ವಿಠ್ಠಲ ಲದವಾ, ಬಾಳು ಮಗಜಿಕೊಂಡಿ, ಶ್ರೀ ರಂಗಾ ಬದ್ದಿ, ಶ್ರೀ ಯೋಗೇಶ ಹಬೀಬ ಸೇರಿದಂತೆ ಸಮಾಜದ ನೂರಾರು ಪಂಚ ಪ್ರಮುಖರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಚಿವರಾದ ಪ್ರಹ್ಲಾದ ಜೋಶಿ ಅವರು ಮೀರಾ ಮೆಹರವಾಡೆ ಅವರನ್ನು ಸತ್ಕರಿಸಿ, ಮೀರಾ ಮೆಹರವಾಡೆ ರವರ ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಇದ್ದರು.