ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 47,204 ಯುವ ಮತದಾರರು ನೋಂದಣಿಯಾಗಿದ್ದಾರೆ.
ಧಾರವಾಡ ಲೋಕಸಭಾ ಮತಕ್ಷೇತ್ರದ 69-ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2,770 ಯುವಕರು, 2,591 ಯುವತಿಯರು ಸೇರಿ ಒಟ್ಟು 5,361 ಮತದಾರರಿದ್ದಾರೆ. 70-ಕುಂದಗೋಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2,877 ಯುವಕರು 2,520 ಯುವತಿಯರು, ತೃತೀಯಲಿಂಗ 1 ಸೇರಿ ಒಟ್ಟು 5,398 ಮತದಾರರಿದ್ದಾರೆ. 71-ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 3,325 ಯುವಕರು, 2675 ಯುವತಿಯರು ಸೇರಿ ಒಟ್ಟು 6,000 ಮತದಾರರಿದ್ದಾರೆ. 72-ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2,655 ಯುವಕರು, 2408 ಯುವತಿಯರು, ತೃತೀಯಲಿಂಗ 3 ಸೇರಿ ಒಟ್ಟು 5,066 ಮತದಾರರಿದ್ದಾರೆ. 73-ಹುಬ್ಬಳ್ಳಿ -ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2,834 ಯುವಕರು, 2,657 ಯುವತಿಯರು ಸೇರಿ ಒಟ್ಟು 5,491 ಮತದಾರರಿದ್ದಾರೆ. 74-ಹುಬ್ಬಳ್ಳಿ -ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 3,103 ಯುವಕರು 2,844 ಯುವತಿಯರು ಸೇರಿ ಒಟ್ಟು 5,947 ಮತದಾರರಿದ್ದಾರೆ. 75-ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 3,486 ಯುವಕರು 3,070 ಯುವತಿಯರು ಸೇರಿ ಒಟ್ಟು 6,556 ಮತದಾರರಿದ್ದಾರೆ. 11-ಧಾರವಾಡ ಮತಕ್ಷೇತ್ರ ವಾಪ್ತಿಯಲ್ಲಿ ಬರುವ ಹಾವೇರಿ ಜಿಲ್ಲೆಯ 83-ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 3,955 ಯುವಕರು, 3,429 ಯುವತಿಯರು, ತೃತೀಯಲಿಂಗ 1 ಸೇರಿ ಒಟ್ಟು 7,385 ಮತದಾರರಿದ್ದಾರೆ.
ಧಾರವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 25,005 ಯುವಕರು, 22,194 ಯುವತಿಯರು ಮತ್ತು ತೃತೀಯಲಿಂಗ 5 ಸೇರಿ ಒಟ್ಟು 47,204 ಮತದಾರರು ನೋಂದಾಯಿತರಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ,