Ad imageAd image

ರೇವಡಿಹಾಳದಲ್ಲಿ ಮಕ್ಕಳಿಗೆ ಬಿಸಿಯೂಟ ವಿತರಣೆ

Hubballi Dhwani
ರೇವಡಿಹಾಳದಲ್ಲಿ ಮಕ್ಕಳಿಗೆ ಬಿಸಿಯೂಟ ವಿತರಣೆ
WhatsApp Group Join Now
Telegram Group Join Now

ರೇವಡಿಹಾಳದಲ್ಲಿ ಮಕ್ಕಳಿಗೆ ಬಿಸಿಯೂಟ ವಿತರಣೆ

ಹುಬ್ಬಳ್ಳಿ; ಮಜೇಥಿಯಾ ಫೌಂಡೇಶನ್ ಆಶ್ರಯದಲ್ಲಿ ರೇವಡಿಹಾಳದ ಶ್ರೀ ದಯಾನಂದ ವಿದ್ಯಾರಣ್ಯ ಭಾರತೀ ಗುರುಕುಲ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಸನ್ನಿಧಾನ ಶತಾಯುಷಿ ಪೂಜ್ಯ ಮಹದೇವಾನoದ ಸರಸ್ವತಿ ಅವರು ಯೋಜನೆಗೆ ಚಾಲನೆ ನೀಡಿದರು
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಪೂಜ್ಯ ಶ್ರಿ ಸ್ವಾಮಿ ಚಿದ್ರುಪಾನಂದ ಸರಸ್ವತಿ ಸ್ವಾಮೀಜಿ ಮಕ್ಕಳಿಗೆ ಬಿಸಿ ಊಟ ಬಡಿಸಿ ಆಶೀರ್ವದಿಸಿದ ಅವರು ಆಹಾರವು ದಿವ್ಯ ಶಕ್ತಿ ಹೊಂದಿದ್ದು ಒಂದು ಶರೀರದ ಅಂಗಾಂಗಳನ್ನು ವೃದ್ಧಿಪಡಿಸುತ್ತದೆ. ಹಾಗೂ ಮನಸ್ಸು, ಬುದ್ಧಿ, ಆಂತರಿಕ ವ್ಯಕ್ತಿತ್ವ ಬೆಳೆಸಲು ಪೂರಕವಾಗಿದೆ. ಶರೀರ ಬದಲಾವಣೆ, ಬುದ್ಧಿ ಬದಲಾವಣೆ ಇದಕ್ಕೆ ಆಹಾರ ಒಂದು ವಿಶೇಷ ಶಕ್ತಿಯಾಗಿದೆ. ವಿದ್ಯಾರ್ಥಿಗಳಲ್ಲಿ ಅದ್ಬುತ ಶಕ್ತಿ ಇದೆ ಕ್ರಿಯಾಶೀಲ ಮನೋಭಾವನೆ ಇದೆ ಅದನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕಾದರೆ ಸಾಧನೆ ಮಾಡಿದವರ ಮಾರ್ಗದರ್ಶನ ಅಗತ್ಯ ಅಂತವರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಅಲ್ಲದೇ ಪರಿಸರ ದಿನ – ದಿನಕ್ಕೆ ಅಶುದ್ಧವಾಗುತ್ತಿರುವುದರಿಂದ ರೋಗಗಳು ಇಮ್ಮಡಿಯಾಗುತ್ತಿದೆ ವಿದ್ಯಾರ್ಥಿಗಳು ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಆಶೀರ್ವದಿಸಿದರು. 9 ವರ್ಷಗಳಿಂದ ಮಧ್ಯಾಹ್ನದ ಬಿಸಿ ಊಟ ಕೊಡುತ್ತಿರುವ ಮಜೇಥಿಯಾ ಫೌಂಡೇಶನ್ ಅವರ ಸೇವೆ ಅರ್ಥಪೂರ್ಣವಾಗಿದೆ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಜೇಥಿಯಾ ಫೌಂಡೇಶನ್ ದ ಟ್ರಸ್ಟಿಗಳಾದ ಡಾ.V. B. ನಿಟಾಲಿ ಅವರು ಮಾತನಾಡಿ ವಿದ್ಯಾರ್ಥಿಗಳು ಆಹಾರ ಸೇವನೆ ಮಾಡುವಾಗ ಪೌಷ್ಟಿಕಯುಕ್ತ ಆಹಾರವನ್ನು ಸೇವನೆ ಮಾಡಬೇಕು ಇದರೊಂದಿಗೆ ಹೆಚ್ಚಿನ ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಅವಶ್ಯಕತೆ ಇರುವಂತಹ ಪೌಷ್ಠಿಕತೆಗಳು ದೊರೆಯುತ್ತದೆ ಋತುಮಾನ ತಕ್ಕಂತೆ ಆಹಾರಗಳ ಸೇವನೆ ಅತೀ ಅವಶ್ಯವಾಗಿದೆ

ಅತಿಥಿಗಳಾಗಿ ಮಜೇಥಿಯಾ ಫೌಂಡೇಶನ್ ದ ಟ್ರಸ್ಟಿಗಳಾದ ಡಾ. ಜ್ಯೋತಿ ಕಾಚಾಪುರ, ಅಮೃತಬಾಯ್ ಪಟೇಲ್, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಸುನೀಲ ಕುಕ್ಕನೂರ, ನವೀನ ಮಾಲಿನ, ರೋಹನ ಗೊಂದಕರ , ಅಕ್ಷಯ ಟ್ರಸ್ಟಿನ ಕಾರ್ಯದರ್ಶಿ ಶುಭಾ ಬಿಜಾಪುರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಆಕಾಶ ಗಣಿ ಸ್ವಾಗತಿಸಿದರು.ಶಾಲಾ ಆಡಳಿತಾಧಿಕಾರಿಗಳು ರತ್ನಾಕರ ಪೂಜಾರಿ ನಿರೂಪಿಸಿದರು. ಕೃತಿಕಾ ಮೊಘೆ ವಂದಿಸಿದರು.

WhatsApp Group Join Now
Telegram Group Join Now
Share This Article
error: Content is protected !!