ಕೊನೆಗೂ ಸಿಕ್ಕ ಅಂಜಲಿ ಕೊಂದ ಹಂತಕ
ಹುಬ್ಬಳ್ಳಿ; ಅಂಜಲಿ ಹತ್ಯೆ ಮಾಡಿದ್ದ ಆರೋಪಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಆಟೋದಲ್ಲಿ ಬಂದು 5 ನಿಮಿಷದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದು, ಎಲ್ಲಿಗೆ? ಹೇಗಿತ್ತು ಆತನ ಟ್ರಾವೆಲ್ ಹಿಸ್ಟರಿ? ಈಗ ಎಲ್ಲಿದ್ದಾನೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
ಬುಧವಾರ ಬೆಳ್ಳಂ ಬೆಳಿಗ್ಗೆ ಅಂಜಲಿ ಯನ್ನು ಹತ್ಯೆ ಮಾಡಿದ್ದ ಹಂತಕ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಹೋಗಿದ್ದಾನೆ. ಅಲ್ಲಿಂದ ಬಸ್ ಹಿಡಿದು ಗಬ್ಬೂರ ಬೈಪಾಸ್ ವರೆಗೂ ಹೋಗಿದ್ದಾನೆ. ನಂತರ ರೈಲ್ವೆ ನಿಲ್ದಾಣದಿಂದ ದಾವರಣಗೇರೆವರೆಗೂ ತೆರಳಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯರ ಶೌಚಾಲಯದಲ್ಲಿ ಬಾಗಿಲು ಹಾಕಿಕೊಂಡು ಕುತಿದ್ದ ಇತನನ್ನು ಹಿಡಿದು ಜನರು ಥಳಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ದಾವಣಗೇರೆಯ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಅಲ್ಲಿ ಎಂಎಲ್ ಸಿ ಮಾಡಿದ್ದರಿಂದ ಆರೋಪಿ ಬಗ್ಗೆ ಡಿವೈಎಸ್ ಪಿಯವರಿಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಹುಬ್ಬಳ್ಳಿ ಆಯುಕ್ತರಿಗೆ ಮಾಹಿತಿ ರವಾನಿಸಲಾಗಿದೆ. ರಾತ್ರೋ ರಾತ್ರಿ ದಾವಣಗೇರೆಯಿಂದ ಹುಬ್ಬಳ್ಳಿ ಕಿಮ್ಸ್ ಗೆ ಆರೋಪಿಯನ್ನು ಕರೆ ತಂದು ಚಿಕಿತ್ಸೆ ಕೂಡಿಸಲಾಗುತ್ತಿದೆ.
ಆತ್ಮಹತ್ಯೆಗೆ ಯತ್ನ; ನಾನು ತಪ್ಪಿಸಿಕೊಳ್ಳಲು ದಾವಣಗೇರೆ ಟ್ರೇನ್ ಹತ್ತಿದ್ದೆ. ಅದರಿಂದ ಬಿದ್ದು ಆತ್ಮಹತ್ಯೆ ಗೆ ಯತ್ನಿಸಿದೆ ಎಂದು ಆರೋಪಿ ಹೇಳಿದ್ದಾನೆ ಎನ್ನಲಾಗಿದೆ. ತನಿಖೆಯಿಂದ ಸತ್ಯ ಹೊರಬರಬೇಕಿದೆ.