ಹುಬ್ಬಳ್ಳಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ನಡೆಯುತ್ತಿರುವ ಅಂಧ ಬಾಲಕರ ಸರ್ಕಾರಿ ಪಾಠಶಾಲೆಯ 2024-25ನೇ ಸಾಲಿನ 1 ರಿಂದ 7ನೇ ತರಗತಿಗಳ ಪ್ರವೇಶಕ್ಕೆ ಅಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಸತಿಯುತ ಹಾಗೂ ವಸತಿ ರಹಿತ ವ್ಯವಸ್ಥೆ ಹೊಂದಿದ್ದು, ಶೇಕಡಾ 45 ಕ್ಕಿಂತ ಹೆಚ್ಚು ಅಂಧತ್ವ ಹೊಂದಿದ ಅಂಧ ಮಕ್ಕಳಿಗೆ ಪ್ರವೇಶ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಹಾಗೂ ಉಚಿತ ಶಿಕ್ಷಣ ಕಲ್ಪಿಸಲಾಗುವುದು. ರಾಜ್ಯ ಸರ್ಕಾರದ ಪಠ್ಯ ಕ್ರಮದಂತೆ ಶಿಕ್ಷಣ ನೀಡಲಾಗುತ್ತದೆ. ಹಿಂದೂಸ್ಥಾನಿ-ಶಾಸ್ತಿçÃಯ ಸಂಗೀತವನ್ನು ಒಂದು ಪಠ್ಯ ವಿಷಯವಾಗಿ ಬೋಧಿಸಲಾಗುತ್ತದೆ. ಉಚಿತ ಔಷಧೋಪಚಾರ ಒದಗಿಸಲಾಗುತ್ತದೆ.
ವಿದ್ಯಾರ್ಥಿಗಳು ಎಂಟು ಪಾಸ್‌ಪೋರ್ಟ್ ಭಾವಚಿತ್ರಗಳು, ಜನನ ಪ್ರಮಾಣ ಪತ್ರ, ಅಂಗವಿಕಲತೆಯ ಪ್ರಮಾಣ ಪತ್ರ, ಯುಡಿಐಡಿ ಕಾರ್ಡ, ಪಾಲಕರ ಆಧಾರ ಕಾರ್ಡ್ ಇತರೆ ದಾಖಲೆಗಳೊಂದಿಗೆ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಅಂಧ ಬಾಲಕರ ಸರ್ಕಾರಿ ಪಾಠಶಾಲೆ, 19/3 ಮೇದಾರ ಪ್ಲಾಟ್, ಮೌಂಟ್ ಫರಾಣ ಕಾಲೇಜಿನ ಹಿಂಭಾಗ, ಆನಂದನಗರ ರಸ್ತೆ ಹುಬ್ಬಳ್ಳಿ ಅಥವಾ ದೂರವಾಣಿ ಸಂಖ್ಯೆ 99644 93770 ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಅಂಧ ಬಾಲಕರ ಸರ್ಕಾರಿ ಪಾಠಶಾಲೆಯ ಅಧೀಕ್ಷಕರಾದ ರಾಜಕುಮಾರ ಸಾಬೋಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.