ಜೂ.16ರಂದು ಹೇಮರಡ್ಡಿ ಮಲ್ಲಮ್ಮ ಜಯಂತಿ ಉತ್ಸವ
ಗಣ್ಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಹುಬ್ಬಳ್ಳಿ: ಶಿವಶರಣೆ ಹೇಮರಡ್ಡಿ ಮಲ್ಲಮ್ಮನ 602 ನೇ ಜಯಂತಿ ಉತ್ಸವದ ಅಂಗವಾಗಿ ರಡ್ಡಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಹುಬ್ಬಳ್ಳಿ ವತಿಯಿಂದ ಜೂ.16 ರಂದು ಬೆಳಿಗ್ಗೆ 10.30 ಕ್ಕೆ ಜನ್ಮ ಶತಮಾನೋತ್ಸವ ಸಮಾರಂಭ ನಿಮಿತ್ತ ಕುಸುಗಲ್ ರಸ್ತೆಯ ಶಬರಿನಗರದ ಹತ್ತಿರದ ಎಸ್.ಎಸ್.ಎಸ್.ಕೆ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಫಕ್ಕೀರಪ್ಪ ತಟ್ಟಿಮನಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು 90 ವರ್ಷದ ಮೇಲ್ಪಟ್ಟ ಸಮಾಜದ ಹಿರಿಯ ನಾಗರಿಕರಿಗೆ, ವೈದ್ಯರು, ಸಿಎಗಳು, ವಕೀಲರು, ಸಮಾಜದ ಉನ್ನತ ಅಧಿಕಾರಿಗಳು, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು.
ಇದರ ಜೊತೆಗೆ 2023-24ನೇ ಸಾಲಿನ ವಯೋ ನಿವೃತ್ತ ಹೊಂದಿದ ಗಣ್ಯ ವ್ಯಕ್ತಿಗಳು, ಎಸ್.ಎಸ್. ಎಲ್.ಸಿ, ಪಿಯುಸಿಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.
ವೇಮಾನಂದ ಸ್ವಾಮೀಜಿ ಹಾಗೂ ಪತ್ರಿವನದ ಸಿದ್ದ ವೀರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಸಚಿವರಾದ ಹೆಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಶಾಸಕರಾದ ಎನ್.ಹೆಚ್. ಕೊನರೆಡ್ಡಿ, ಪ್ರಸಾದ ಅಬ್ಬಯ್ಯ, ಎಂ.ಆರ್.ಪಾಟೀಲ, ಮಹೇಶ ಟೆಂಗಿನಕಾಯಿ ಸೇರಿದಂತೆ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಗುರುನಾಥಗೌಡ ಕೆಂಪಲಿಂಗೆಗೌಡ್ರ, ಆರ್.ಕೆ.ಪಾಟೀಲ್, ರಾಜಕುಮಾರ ಕಾಮರಡ್ಡಿ, ಮಂಜುನಾಥ ರೆಡ್ಡಿ ಕಿರೆಸೂರು, ವೆಂಕರೆಡ್ಡಿ ಕರಡ್ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.