ಎನಕೌಂಟರ್ ಮಾಡಿದ್ದರೆ ಈ ಮಗಳು ಬಲಿಯಾಗುತ್ತಿರಲಿಲ್ಲ ; ನಿರಂಜನ ಹಿರೇಮಠ ಆಕ್ರೋಶ
ಹುಬ್ಬಳ್ಳಿ; ನೇಹಾಳ ಹತ್ಯೆ ಮಾಡಿದ್ದ ಆರೋಪಿಯನ್ನು ಎನ್ ಕೌಂಟರ್ ಮಾಡಿದ್ದರೆ ಮತ್ತೊಂದು ಯುವತಿ ಇಂದು ಬಲಿಯಾಗುತ್ತಿರಲಿಲ್ಲ ಎಂದು ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.
ಕೊಲೆಯಾದ ಅಂಜಲಿ ಕುಟುಂಬಸ್ಥರನ್ನು ನಿರಂಜನ ಹಿರೇಮಠ ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಮಗಳು ನೇಹಾ ಕಳೆದುಕೊಂಡ ದುಃಖದಲ್ಲಿದ್ದೇವೆ. ಈಗ ನಮ್ಮ ವಾರ್ಡ್ನ ಮಗಳನ್ನು ಕಳೆದುಕೊಂಡಿದ್ದೇವೆ. ಇನ್ನೂ ಎಷ್ಟು ಬಲಿಯಾಗಬೇಕು.
ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಎಂದರು.
ಈ ಸುದ್ದಿ ಓದಿ; ಚಾಕುವಿನಿಂದ ಇರಿದು ಯುವತಿ ಕೊಲೆ
ಅಂಜಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ಹೀಗಾಗಿ, ಹುಬ್ಬಳ್ಳಿಗೆ ದಕ್ಷ ಪೊಲೀಸ್ ಅಧಿಕಾರಿ ಬೇಕು. ಗೃಹ ಇಲಾಖೆ ನಿರ್ಲಕ್ಷ್ಯ ಮಾಡಿದೆ, ನಿಮಗೆ ನಿಭಾಯಿಸಲು ಆಗದೆ ಹೋದರೆ ರಾಜೀನಾಮೆ ಕೊಡಿ.ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನೇಹಾಳ ಪ್ರಕರಣದಂತೆ ಈ ಹತ್ಯೆಯನ್ನು ಸರ್ಕಾರ ಮುಚ್ಚಿ ಹಾಕಲು ಮುಂದಾಗಬಾರದು. ಮಗಳ ಕೊಲೆಯ ನಂತರ ಮುಖ್ಯಮಂತ್ರಿಗಳು ಕರೆ ಮೂಲಕ ಸಂಪರ್ಕಿಸಿದರೂ ಸೌಜನಕ್ಕೂ ಭೇಟಿಯಾಗಲು ಬರಲಿಲ್ಲ. ಗೃಹ ಸಚಿವರು ಮಾಹಿತಿಗೂ ಕರೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ಲಕ್ಷ ರೂ. ಸಹಾಯ;
ವಾರ್ಡ್ ನ ಪಾಲಿಕೆ ಸದಸ್ಯರಾಗಿರುವ ನಿರಂಜನ ಹಿರೇಮಠ ಅವರು ಸ್ಥಳಕ್ಕೆ ಭೇಟಿ ನೀಡಿ ಮೃತಳ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮತ್ತೊಬ್ಬ ಮಗಳನ್ನು ಕಳೆದುಕೊಂಡಿದ್ದೇನೆ. ನ್ಯಾಯ ಒದಗಿಸಲು ಹೊರಾಡುವೆ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು. ಕುಟುಂಬಕ್ಕೆ 1 ಲಕ್ಷ ರೂ. ಸಹಾಯವನ್ನು ಮಾಡಿದರು.