Ad imageAd image

ಸಾಕ್ಷಿದಾರರಿಗೆ ಬೆದರಿಕೆ

Hubballi Dhwani
ಸಾಕ್ಷಿದಾರರಿಗೆ ಬೆದರಿಕೆ
WhatsApp Group Join Now
Telegram Group Join Now

ಸಾಕ್ಷಿದಾರರಿಗೆ ಬೆದರಿಕೆ

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಕೊಲೆ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಆರೋಪಿತರು ಸಾಕ್ಷಿದಾರರಿಗೆ ಬೆದರಿಕೆ ಹಾಕಿದ್ದರ ಕುರಿತ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಚಂದ್ರಶೇಖರ ಕೊಲೆ ಪ್ರಕರಣವು ನಗರದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕೋರ್ಟ್‌ಗೆ ಹಾಜರಾಗಿದ್ದ ವೇಳೆ ಬಂಧಿತರಾದ ಮಹಾಂತೇಶ ಸಿರೂರ ಮತ್ತು ಮಂಜುನಾಥ ಮರೆವಾಡ ಎಂಬುವರು ಪ್ರಕರಣದ ದೂರುದಾರರಾದ ಸಂಜಯ ಅಂಗಡಿ ಮತ್ತು ಅವರ ಸಹೋದರಿ ಸ್ವಾತಿ ಅವರಿಗೆ ಕೋರ್ಟ್‌ನಲ್ಲಿ ಕಂಡರೆ ಗುರೂಜಿ ರೀತಿ ಎತ್ತುವುದಾಗಿ ಹಾಗೂ ಜೈಲಿನಿಂದ ಹೊರಗಡೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಸುರೇಶ ಎಂಬುವವರ ಮೂಲಕ ರಾಜೀ ಮಾಡಿಕೊಳ್ಳಬೇಕೆಂದು ಧಮ್ಮಿ ಹಾಕಿದ್ದಾರೆ ಎಂದು ಸಂಜಯ ಅವರು ಪೊಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!