Ad imageAd image

ರಾಜಕೀಯ ಮುಖಂಡರ ಮನೆ ಮೇಲೆ ಐಟಿ ದಾಳಿ

Hubballi Dhwani
ರಾಜಕೀಯ ಮುಖಂಡರ ಮನೆ ಮೇಲೆ ಐಟಿ ದಾಳಿ
WhatsApp Group Join Now
Telegram Group Join Now

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ರಾಜಕೀಯಬಮುಖಂಡರ ಮನೆ ಮೇಲೆ ಮೇಲೆ ಐಟಿ ದಾಳಿಯಾಗಿದೆ.‌

ಕಾಂಗ್ರೆಸ್ ನಾಯಕರು ಎಂದು ಹೇಳಲಾಗುತ್ತಿರುವ ಹೆಬ್ಬಳ್ಳಿ ಗ್ರಾಮದ ಈರಣ್ಣ ಶಿವಳ್ಳಿ ಹಾಗೂ ಶಿವಳ್ಳಿ ಗ್ರಾಮದ ಫೈರೋಜ್ ನಾಯ್ಕರ್ ಎಂಬಾತರ ಮನೆಯ ಮೇಲೆಯೇ ಐಟಿ ದಾಳಿಯಾಗಿದೆ.

ಈಗಾಗಲೇ ಹತ್ತಾರು ಅಧಿಕಾರಿಗಳು ಇಬ್ಬರ ಮನೆಯನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಈ ವೇಳೆ ಮಹತ್ವದ ದಣಸಖಲಾತಿಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಅಧಿಕಾರಿಗಳೂ ತಮ್ಮ ಪರಿಶೀಲನೆ ಕಾರ್ಯ ಮುಂದುವರೆಸಬಹುದಿದ್ದು, ಹೀಗಾಗಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು‌ ಹಣ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ‌ ಆಧರಿಸಿ ಐಟಿ ತಂಡ‌ ದಾಳಿ ನಡೆಸಿದೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ತಾಲೂಕಿನ ಕೆಲವು ಕಾಂಗ್ರೆಸ್ ಮುಖಂಡರ ಮನೆ, ಅಂಗಡಿ ಮತ್ತು ಕಚೇರಿಗಳನ್ನು ಅಧಿಕಾರಿಗಳು ಜಾಲಾಡಿದ್ದರು. ಇದೀಗ‌ ಮತ್ತೆ ನಡೆದಿರುವ ಐಟಿ ದಾಳಿಯಿಂದ ಕಾಂಗ್ರೆಸ್ ‌ನಾಯಕರು ಆತಂಕಕ್ಕೊಳಗಾಗಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!