ಮಾನವೀಯತೆ ಮೆರೆದ ಕೆವಿಜಿ ಬ್ಯಾಂಕ್ ಮ್ಯಾನೇಜರ್
ಹುಬ್ಬಳ್ಳಿ: ಟಾಟಾ ಎಸ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆವಿಜಿ ಬ್ಯಾಂಕ್ ಬಮ್ಮಿಗಟ್ಟಿ ಮ್ಯಾನೇಜರ್ ಪ್ರದೀಪ ಮಾನವೀಯತೆ ಮೆರೆದಿದ್ದಾರೆ.
ಘಟನೆ ಕಂಡು ಕಾಣದಂತೆ ದೂರ ಹೋಗುತ್ತಿದ್ದವರನ್ನು ಕರೆದು ಗಾಯಗೊಂಡವರನ್ನು ಉಪಚರಿಸಿದ್ದಾರೆ. ನಂತರ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮದಳ ಮತ್ತು ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ರವಾನೆ ಮಾಡಿದ್ದಾರೆ.
ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಬಾರದಿದ್ದಾಗ ಅಪಘಾತಗೊಂಡ ವಾಹನವನ್ನೇ ತೆಗೆದುಕೊಂಡು ಹೊಗಲು ಕೆಲವರು ಮುಂದಾಗಿದ್ದರು. ಆ ಸಂದರ್ಭದಲ್ಲಿ ತಡೆದು ಬೇರೆ ವಾಹನದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತಗಳು ನಡೆದ ಸಂದರ್ಭದಲ್ಲಿ ಕಂಡು ಕಾಣದಂತೆ ಹೋಗುವವರ ಮಧ್ಯೆ ಸಹಾಯಕ್ಕೆ ಧಾವಿಸುವವರ ಸಂಖ್ಯೆ ಅತ್ಯಂತ ಕಡಿಮೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ಘಟನೆಯಲ್ಲಿ ಒರ್ವ ಮಹಿಳೆ ಮೃತಪಟ್ಟಿದ್ದು, ೧೮ ಜನರಿಗೆ ಗಂಭೀರ ಗಾಯಗಳಾಗಿವೆ.ಮಾನವೀಯತೆ ಮೆರೆದ ಬ್ಯಾಂಕ್ ಮ್ಯಾನೇಜರ್ ಕಾರ್ಯಕ್ಕೆ ಹುಬ್ಬಳ್ಳಿ ಧ್ವನಿ ಮೆಚ್ಚುಗೆ ವ್ಯಕ್ತಪಡಿಸಿದೆ.