ಧಾರವಾಡ;ಮೇ 7ರಂದು ಮತದಾನ ದಿನ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ಮೈಕ್ರೋ ಅಬ್ಸರ್ವರ್ ಗಳು ಕಾರ್ಯ ನಿರ್ವಹಿಸಲಿದ್ದಾರೆ.
ಧಾರವಾಡ ಲೋಕಸಭಾ ಚುನಾವಣೆಯಲ್ಲಿ 1180 ಪುರುಷರು, 755 ಮಹಿಳೆಯರು ಸೇರಿ ಒಟ್ಟು 1935 ಪಿಆರ್ಓಗಳು ಕಾರ್ಯನಿರ್ವಹಿಸಲಿದ್ದಾರೆ. 1153 ಪುರುಷರು, 782 ಮಹಿಳೆಯರು ಸೇರಿ ಒಟ್ಟು 1935 ಎಪಿಆರ್ಓಗಳು ಕಾರ್ಯನಿರ್ವಹಿಸಲಿದ್ದಾರೆ. 1574 ಪುರುಷರು, 2296 ಮಹಿಳೆಯರು ಸೇರಿ ಒಟ್ಟು 3870 ಪೊಲಿಂಗ್ ಆಫಿಸರ್ಗಳು ಕಾರ್ಯನಿರ್ವಹಿಸಲಿದ್ದಾರೆ ಹಾಗೂ ಒಟ್ಟು 346 ಮೈಕ್ರೋ ಅಬ್ಸರ್ವರ್ಗಳಿದ್ದು, ಒಟ್ಟಾರೆಯಾಗಿ 8086 ಸಿಬ್ಬಂದಿಗಳು ಚುನಾವಣೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ದಿವ್ಯ ಪ್ರಭು ಅವರು ತಿಳಿಸಿದರು.