Ad imageAd image

ದಿಂಗಾಲೇಶ್ವರ ಶ್ರೀಗಳ ವಿರುದ್ಧ ಪ್ರಕರಣ; ನಿರಂಜನ ಹಿರೇಮಠ ಆಕ್ರೋಶ

Hubballi Dhwani
ದಿಂಗಾಲೇಶ್ವರ ಶ್ರೀಗಳ ವಿರುದ್ಧ ಪ್ರಕರಣ;  ನಿರಂಜನ ಹಿರೇಮಠ ಆಕ್ರೋಶ
WhatsApp Group Join Now
Telegram Group Join Now

ಹುಬ್ಬಳ್ಳಿ; ಭಾವೈಕ್ಯ ತೆಗೆ ಸಾಕ್ಷಿಯಾಗಿರುವ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ವಿರುದ್ಧ ಜಾತಿ, ಧರ್ಮ ಹಾಗೂ ಸಮುದಾಯಗಳ ನಡುವೆ ವೈರತ್ವ ಮತ್ತು ದ್ವೇಷ ಭಾವನೆ ಮೂಡಿಸುವ ಹೇಳಿಕೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿರುವ ಕುರಿತು ಬೇಡ ಜಂಗಮ ರಾಜ್ಯ ಯುವ ಘಟಕದ ಅಧ್ಯಕ್ಷ ನಿರಂಜನ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಹೋರಾಟ ಹತ್ತಿಕ್ಕುವ ಹುನ್ನಾರದಿಂದ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದೀಗ ನವಲಗುಂದದಲ್ಲಿ ಪ್ರಕರಣ ದಾಖಲಿಸಿ ಹೆದರಿಸುವ ಪ್ರಯತ್ನ ಮಾಡಲಾಗಿದೆ. ವಿರಶೈವ ಲಿಂಗಾಯತ ಸಮಾಜ ಇದನ್ನು ಸಹಿಸುವುದಿಲ್ಲ. ನಾವು ಸೌಮ್ಯ ಸ್ವಭಾವದವರು. ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಬೇಡಿ. ನೇಹಾ ಪ್ರಕರಣವೇ ಬೇರೆ.‌ ಸಮಾಜದ ಹೋರಾಟವೇ ಬೇರೆ.‌ ಸಮಾಜಕ್ಕಾಗಿ ಸದಾ ಹೋರಾಡುವೆ ಎಂದರು.

WhatsApp Group Join Now
Telegram Group Join Now
Share This Article
error: Content is protected !!