ಕಳೆದ ವರ್ಷದಂತೆಯೇ ಈ ವರ್ಷವೂ ಕೂಡ ನಗರದ ಘಂಟಿಕೇರಿ ಓಣಿಯಲ್ಲಿ ದಸರಾ ಹಬ್ಬದ ಅಂಗವಾಗಿ ಶ್ರೀ ತುಳಜಾಭವಾನಿ ದೇವಿಯ ಪ್ರತಿರೂಪವಾದ ಶ್ರೀ ಏಳುಮಕ್ಕಳ್ ತಾಯಿಯ ಪೂಜಾ ಮತ್ತು ಭಜನಾ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು,
ಪವಿತ್ರ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಮಹಾಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಓಣಿಯ ಗುರು ಹಿರಿಯರು ಮಾತೆಯರು ಹಾಗೂ ನೂರಾರು ಭಕ್ತಾದಿಗಳು ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡು ಮಹಾ ಪ್ರಸಾದವನ್ನು ಸವಿದರು,
ಮದ್ಯಾಹ್ನ ವೇಳೆಗೆ ಪ್ರಸಾದ ಮುಗಿಸಿ, ಸಾಯಂಕಾಲ ನೂರಾರು ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಧರ್ಮ ಜಾಗೃತಿ ಮೂಡಿಸಿದರು,
ತದ ನಂತರ ಮಹಿಳೆಯರಿಗಾಗಿ ದಾಂಡಿಯಾ ಹಾಗೂ ಪುಟಾಣಿ ಮಕ್ಕಳಿಗೆ ಮನೋರಂಜನಾ ಕಾರ್ಯಕ್ರಮ ಗಳನ್ನು ಆಯೋಜಿಸಿ ಪುಟಾಣಿ ಮುದ್ದು ಮಕ್ಕಳಿಗೆ ದಾನಿಯರಿಂದ ಬಹುಮಾನ ವಿತರಣೆ ಮಾಡುವ ಮೂಲಕ ದಸರಾ ಹಬ್ಬದ ನಿಮಿತ್ಯ ಆಯೋಜಿಸಿದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು..
ಈ ಒಂದು ಕಾರ್ಯಕ್ರದಲ್ಲಿ ಘಂಟಿಕೇರಿ ಹಾಗೂ ಅಗಸರ ಓಣಿಯ ಗುರು ಹಿರಿಯರು ಭಾಗವಹಿಸಿದ್ದರು