ನಿರೀಕ್ಷೆಯಂತೆ ಸಾಧನೆ ಮಾಡದ ಧಾರವಾಡ ಜಿಲ್ಲೆ
ಅಧಿಕಾರಿಗಳ ವಿರುದ್ಧ ಪಾಲಕರ ಆಕ್ರೋಶ
2023 24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಾರಿ ಧಾರವಾಡ ಜಿಲ್ಲೆ ಶೇ.72.67 ರಷ್ಟು ಸಾಧನೆ ಮಾಡಿ, ೨೨ನೇ ಸ್ಥಾನ ಪಡೆದಿದೆ.
2022 2023 ನೇ ಸಾಲಿನಲ್ಲಿ ೨೪ನೇ ಸ್ಥಾನ ಪಡೆದಾಗ
ಈ ಬಾರಿ ಟಾಪ್ 10 ಗುರಿ ನಿಗದಿಪಡಿಸಿಕೊಂಡಿದ್ದ ಅಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಧಾರವಾಡ ಜಿಲ್ಲೆ ಶೇ.೮೩ರಷ್ಟು ಫಲಿತಾಂಶ ದಾಖಲಿಸಿದ ಜಿಲ್ಲೆ ೨೪ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ.72.67 ರಷ್ಟು ಸಾಧನೆ ಮಾಡಿ, 22ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಆದರೆ, ಅಕಾರಿಗಳು ಮತ್ತಷ್ಟು ಶ್ರಮವಹಿಸಿ ಜಿಲ್ಲೆ ಮತ್ತಷ್ಟು ಸಾಧನೆ ಮಾಡುವಂತೆ ನೋಡಿಕೊಳ್ಳಬೇಕಿತ್ತು ಎಂಬುವುದು ಪಾಲಕರ ಮಾತಾಗಿದೆ.
ರಾಜ್ಯದ ಫಲಿತಾಂಶ ಶೇ.10ರಷ್ಟು ಫಲಿತಾಂಶ ಕುಸಿದರೂ, ಧಾರವಾಡ ಜಿಲ್ಲೆ ಎರಡಂಕಿ ಜಿಗಿತ ಕಂಡಿದೆ. ಮೊದಲ ಬಾರಿಗೆ ಪರೀಕ್ಷೆ ಬರೆದವರ ಪೈಕಿ ಶೇ.೭೪.೮೫ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
2023 24ನೇ ಸಾಲಿಗೆ 13537 ಬಾಲಕರು ಮತ್ತು 14011 ಬಾಲಕಿಯರು ಸೇರಿ ಪರೀಕ್ಷೆ ಬರೆದ ಒಟ್ಟು 27543 ವಿದ್ಯಾರ್ಥಿಗಳ ಪೈಕಿ 20614 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ಜಿಲ್ಲೆಯ ಪ್ರಥಮ, ದ್ವಿತೀಯ ಹಾಗೂ ತೃತೀಯ ಮೊದಲ ಮೂರು ಸ್ಥಾನವೂ ವಿದ್ಯಾರ್ಥಿನಿಯರ ಪಾಲಾಗಿದೆ.
ಬಾಲಕರು ಶೇ.66.07 ಮತ್ತು ಹಾಗೂ ಬಾಲಕಿಯರು ಶೇ.83ರಷ್ಟು ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿನ ಸಾಧನೆ ಮಾಡಿದ್ದಾರೆ.
ಧಾರವಾಡ ಗ್ರಾಮೀಣ-ಶೇ. 84.16, ಧಾರವಾಡ ನಗರ-ಶೇ.82.07, ಕಲಘಟಗಿ ಶೇ.52.07, ನವಲಗುಂದ ಶೇ.81.21, ಕುಂದಗೋಳ -ಶೇ.77.62, ಹುಬ್ಬಳ್ಳಿ ಗ್ರಾಮೀಣದ ಶೇ.74.08ರಷ್ಟು ಫಲಿತಾಂಶ ದಾಖಲಿಸಿವೆ. ಹುಬ್ಬಳ್ಳಿ ನಗರ ಶೇ.61ರಷ್ಟು ಸಾಧನೆ ಮಾಡಿದೆ. ನಗರಕ್ಕೆ ಹೊಲಿಸಿದರೆ, ಗ್ರಾಮೀಣ ಪ್ರದೇಶದ ಶೇ.80.22ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದರೆ, ನಗರ ಪ್ರದೇಶದಲ್ಲಿ ಶೇ.71ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.