Ad imageAd image

ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಹರಿಯಿತು ನೆತ್ತರು

Hubballi Dhwani
ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಹರಿಯಿತು ನೆತ್ತರು
WhatsApp Group Join Now
Telegram Group Join Now

ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಹರಿಯಿತು ನೆತ್ತರು

 

ಹುಬ್ಬಳ್ಳಿ: ವಾಣಿಜ್ಯನಗರ ಖ್ಯಾತಿಯ ಹುಬ್ಬಳ್ಳಿ ಇದೀಗ ಚಾಕು ಚೂರಿ ನಗರದ ಅಪಖ್ಯಾತಿಗೆ ಒಳಗಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ.

 

ಈ ಸುದ್ದಿ ಓದಿ; ಮನೆ ಮೇಲೆ ಬಿದ್ದ ಮರ; ಪ್ರಾಣಾಪಯದಿಂದ ಪಾರಾದ ಮನೆಯ ಮಂದಿ

 

 

ಅಂಜಲಿ, ಕೊಲೆಯಾದ ಯುವತಿ

ನಗರದ ವೀರಾಪುರ ಓಣಿಯ ನಿವಾಸಿ ಅಂಜಲಿ ಅಂಬಿಗೇರ (20) ಎಂಬಾಕೆಯೇ ಹತ್ಯೆಗೀಡಾದ ದುರ್ದೈವಿ. ಈಕೆಗೆ ಅದೇ ಏರಿಯಾದ ವಿಶ್ವ ಅಲಿಯಾಸ್ ಗಿರೀಶ್ ಸಾವಂತ (21) ಎಂಬಾತ ಚಾಕುವಿನಿಂದ ಚುಚ್ಚಿ ಕೊಲೆಮಾಡಿದ್ದಾನೆಂದು ತಿಳಿದುಬಂದಿದೆ.

ವಿಶ್ವ ಎಂಬ ಹುಚ್ಚು ಪ್ರೇಮಿ ಕಳೆದ ಹಲವಾರು ದಿನಗಳಿಂದ ಅಂಜಲಿಗೆ ಪ್ರೀತಿಸು ಎಂದು ಪೀಡಿಸುತ್ತಿದ್ದನಂತೆ, ಆದರೆ ಅಂಜಲಿ ಪ್ರೀತಿ ನಿರಾಕರಿಸಿದಕ್ಕೆ ಇಂದು ಬೆಳಂಬೆಳ್ಳಗ್ಗೆ ಗುಡಿಓಣಿಯಲ್ಲಿನ ಅಂಜಲಿ ನಿವಾಸಕ್ಕೆ ತೆರಳಿ ಹತ್ಯೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬೆಂಡಿಗೇರಿ ಪೋಲಿಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!