ನ್ಯಾಯಾಧೀಶರಾದ ಜಿ. ಆರ್. ಶೆಟ್ಟರವರ ಸೇವೆ ನೆನೆದ ಕಲಘಟಗಿ ಜನತ
ಕಲಘಟಗಿ; ತಾಲೂಕಿನ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಪರಸಾಪುರ ಶಾಖೆ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕಲಘಟಗಿ ವತಿಯಿಂದ ನ್ಯಾಯಾಧೀಶರಾದ ಜಿ ಆರ್ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು.
ಗದಗ ಜಿಲ್ಲಾ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾಗಿ ನೇಮಕಗೊಂಡ ಗಿರಿಮಲ್ಲಪ್ಪ ರಾಮಪ್ಪ ಶೆಟ್ಟರ್ ಅವರು ಬನಟ್ಟಿಯ ಕೃಷಿ ಕುಟುಂಬದಲ್ಲಿ ರಾಮಪ್ಪ ಹಾಗೂ ಮಹಾನಂದ ಶೆಟ್ಟರ ದಂಪತಿ ಮಗನಾಗಿ ಜನವರಿ 10, 1972 ರಂದು ಜನಿಸಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ವಕೀಲ ವೃತ್ತಿಯನ್ನು ಆರಿಸಿಕೊಂಡು ಜನ ಸಾಮಾನ್ಯರ ಸಂಕಟಗಳನ್ನು ನಿವಾರಿಸುತ್ತಾ ಬನಹಟ್ಟಿ ಹಾಗೂ ಜಮಖಂಡಿಯಲ್ಲಿ ತಮ್ಮ ಅನುಪಮ ಸೇವೆಯನ್ನ ಮುಂದುವರೆಸಿಕೊಂಡು ಬಂದಿದ್ದರು. 2001 ರಲ್ಲಿ ಜಯಶ್ರೀ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ರಾಹುಲ, ಶಿವಾನಂದ ಹಾಗೂ ವಿಶ್ವನಾಥ ಎಂಬ ಮುದ್ದಾದ ಮೂವರು ಸುಪುತ್ರರು ಹಾಗೂ ಅವರನ್ನು ಕೂಡ ಕಾನೂನು ವಿದ್ಯಾಭ್ಯಾಸದಲ್ಲಿ ತೊಡಗಿಸಿದ್ದಾರೆ.
ಈ ಸುದ್ದಿಯನ್ನು ಓದಿ; ನೇಹಾಳ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ
2009 ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ದೇವನಹಳ್ಳಿ, ಇಂಡಿ. ಸೇಡಂ. ಅನೇಕ ಕಡೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 2017 ರಲ್ಲಿ ಪದೋನ್ನತಿ ಹೊಂದಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಬಡ್ತಿ ಹೊಂದಿ ಆಳಂದ, ಕಲಬುರ್ಗಿ. ಕಲಘಟಗಿ ಪಟ್ಟಣದ ದಿವಾನಿ ನ್ಯಾಯಾಧೀಶರಾಗಿ ತಾಲೂಕಿನ ಜನರ ಜೊತೆ ಹಾಗೂ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ವಿಶೇಷ ವಾಗಿದೆ. ಇವರ ಅನುಪಮ ಸೇವೆಯನ್ನು ಪಟ್ಟಣದ ನ್ಯಾಯಾಲಯದಲ್ಲಿ ಹಿರಿಯ ದಿವಾನಿ ನ್ಯಾಯಾಧೀಶರಾಗಿ ನಾಲ್ಕು ವರ್ಷ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ ಗದಗ ಜಿಲ್ಲಾ ನ್ಯಾಯಾಲಯಕ್ಕೆ ಜಿಲ್ಲಾ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾಗಿ ನೇಮಕಗೊಂಡು ಬಡ್ತಿ ಹೊಂದಿ ತೆರಳುತ್ತಿರುವ ಈ ಸಂದರ್ಭದಲ್ಲಿ ತಾವುಗಳು ಕಲಘಟಗಿಯ ಸೇವಾ ಅವಧಿಯಲ್ಲಿ ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸಿ ನ್ಯಾಯದಾನ ನೀಡಿದ್ದೀರಿ. ಜೊತೆ ಜೊತೆಗೆ ತಾಲೂಕಿನಲ್ಲಿ ಸಂಘಟಿಸಿದ ಕಾನೂನು ಅರಿವು ಜಾಗೃತ ಸಭೆಗಳಲ್ಲಿ ಪಾಲ್ಗೊಂಡು ತಾಲೂಕಿನ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ನಾಗರಿಕರಿಗೆ ಕಾನೂನುಗಳ ಪ್ರಜ್ಞೆ ಮೂಡಿಸಿದ್ದೀರಿ. ಇಂತಹ ಮಹತ್ತರ ಹಾಗೂ ಅನುಪಮ ಸೇವೆಯನ್ನ ಸಲ್ಲಿಸಿದ ತಮ್ಮನ್ನು ನಾವುಗಳು ಸದಾ ಸ್ಮರಿಸುತ್ತೇವೆ. ಹಾಗೂ ತಮ್ಮ ಮುಂದಿನ ಸೇವಾ ಅವಧಿ ಶುಭಕರವಾಗಿರಲಿ ಎಂದು ಎಲ್ಲರಣು ಆಶಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ದನಿಗೊಂಡ್, ಕೆ ಬಿ ಗುಡಿಹಾಳ, ವೀರಣ್ಣ ಕುಬಸದ, ವೈಜಿ ಭಗವತಿ. ಶರಣು ಮಣ್ಣಿವರ. ಮಂಜುನಾಥ್ ಮುಳುಗುಂದ. ಶಂಕರ್ ರಾಟಿ. ಗಿರಿಮಲ್ಲಯ್ಯ ಹುಬ್ಬಳ್ಳಿಮಠ. ಉಪಸ್ಥಿತರಿದ್ದರು.