ಕಲಾ ಸುಜಯ ನೃತ್ಯ ಅಕಾಡೆಮಿಯ ದಶಕದ ಸಂಭ್ರಮ
ಗಮನ ಸೆಳೆದ ಏಕವ್ಯಕ್ತಿ ಪ್ರದರ್ಶನ
ಹುಬ್ಬಳ್ಳಿ: ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಇಲ್ಲಿಯ ಕಲಾ ಸುಜಯ ನೃತ್ಯ ಅಕಾಡೆಮಿಯ ದಶಕದ ಸಂಭ್ರಮದ ಕಾರ್ಯಕ್ರಮದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಾ. ವಸುಂಧರಾ ದೊರಸ್ವಾಮೀಜಿ ಅವರಿಂದ ಕ್ಷಾತ್ರ ದ್ರೌಪದಿ ಎಂಬ ವಿನೂತ ಏಕವ್ಯಕ್ತಿ ಪ್ರದರ್ಶನ ನೆರೆದ ಜನರ ಮನ ಸೆಳೆಯಿತು.
ಕಲಾ ಸುಜಯ ಅಕಾಡೆಮಿಯ ೫೦ ವಿದ್ಯಾರ್ಥಿಗಳು ಶ್ರೀರಾಮನಿಗೆ ನೃತ್ಯ ನಮನ ಎಂಬ ನೃತ್ಯ ಪ್ರದರ್ಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು, ಪ್ರತಿಯೊಬ್ಬರು ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದರು.
೫೦೦ ವರ್ಷದ ಬಳಿಕ ದೇಶದ ಕಲೆಯನ್ನು ಪ್ರತಿಬಿಂಬಿಸುವ ಭವ್ಯ ರಾಮಮಂದಿರ ನಿರ್ಮಾಣವಾದೆ ಎಂದರು.
ಭಾರತೀಯ ಸಂಸ್ಕೃತಿ ಹಾಗೂ ಕಲೆ ಉಳಿಸಿ ಬೆಳೆಸುವ ಕಾರ್ಯವನ್ನು ಕಲಾ ಸುಜಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹು-ಧಾ ದ್ರಾವಿಡ ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಸ್ವರ್ಣಾ ಆಭರಣ ಮಳಿಗೆ ಮಾಲೀಕ ಗುಜ್ಜಾಡಿ ಗೋಪಾಲಕೃಷ್ಣ ನಾಯಕ, ಎಂ.ಎ. ಸುಬ್ರಹ್ಮಣ್ಯ, ಕಮಲಾ ಜೋಶಿ ಇದ್ದರು. ಕಲಾ ಸುಜಯ ಸಂಚಾಲಕ ವಿದ್ವಾನ ಸುಜಯ ಶಾನಭಾಗ ವಂದಿಸಿದರು