Ad imageAd image

ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ ಕೆಎಂಎಫ್?

Hubballi Dhwani
ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ ಕೆಎಂಎಫ್?
WhatsApp Group Join Now
Telegram Group Join Now

ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ ಕೆಎಂಎಫ್?

ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೆಎಂಎಫ್) ಕುಮಟಾ, ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದು, ಈ ಬಾರಿಯೂ ಬಿಜೆಪಿ ಚುಕ್ಕಾಣಿ ಹಿಡಿಯುವುದು ಬಹುತೇಕ ನಿಶ್ಚಿತ ಎಂಬಂತಾಗಿದೆ.

ಕೆಎಂಎಫ್‌ನಿಂದ ಹಾವೇರಿ ಜಿಲ್ಲೆ ಬೇರ್ಪಟ್ಟ ಬಳಿಕ ಧಾರವಾಡ, ಉತ್ತರ ಕನ್ನಡ, ಗದಗ ಜಿಲ್ಲಾ ವ್ಯಾಪ್ತಿಯ ಹಾಲು ಒಕ್ಕೂಟದ ಒಟ್ಟು 9 ನಿರ್ದೇಶಕ ಸ್ಥಾನಕ್ಕೆ ಒಬ್ಬರು (ಗದಗ ಮತ್ತು ನರಗುಂದ ತಾಲೂಕಿನಿಂದ ಹನುಮಂತಗೌಡ ಹಿರೇಗೌಡರ) ಅವಿರೋಧ ಆಯ್ಕೆಯಾಗಿದ್ದರೆ, ಉಳಿದ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು.

ಧಾರವಾಡ, ಅಳ್ಳಾವರ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ಮತಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ. ಅಧ್ಯಕ್ಷರಾಗಿದ್ದ ಶಂಕರ ಮುಗದ (78 ಮತಗಳು) ಅವರು ಹೇಮರೆಡ್ಡಿ ನಾಗರಡ್ಡಿ ಲಿಂಗರಡ್ಡಿ (4) ವಿರುದ್ಧ 74 ಮತಗಳಿಂದ ಭರ್ಜರಿ ಜಯ ಗಳಿಸುವ ಮೂಲಕ 5ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಕಲಘಟಗಿ ತಾಲೂಕು ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಗೀತಾ ಸುರೇಶ ಮರಲಿಂಗಣ್ಣವರ (21) ಅವರು ಹನುಮಂತಪ್ಪ ಕೊರವರ (17) ಎದುರು 4 ಮತಗಳ ಅಂತರದಿಂದ ಜಯ ಗಳಿಸಿದರೆ, ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ತಾಲೂಕು ಮತಕ್ಷೇತ್ರದಿಂದ ಗಂಗಪ್ಪ ಮೂಕಪ್ಪ ಮೊರಬದ (31) ವಿರುದ್ಧ ಸುರೇಶ ಬಣವಿ (36) ಅವರು 5 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಗದಗ ಜಿಲ್ಲೆಯ ರೋಣ ಮತ್ತು ಗಜೇಂದ್ರಗಡ ತಾಲೂಕು ಮತಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ ನೀಲಕಂಠ ಅಸೂಟಿ (29) ಅವರು ಗದಿಗೆಪ್ಪ ಕಿರೇಸೂರ (13) ವಿರುದ್ಧ 16 ಮತಗಳ ಅಂತರದಲ್ಲಿ ಜಯ ಗಳಿಸಿದರೆ, ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷ್ಮೀಶ್ವರ ತಾಲೂಕು ಮತಕ್ಷೇತ್ರದಿಂದ ಲಿಂಗರಾಜಗೌಡ ಹನುಮಂತಗೌಡ ಪಾಟೀಲ (50) ಅವರು ಶೇಖಣ್ಣ ಕಾಳೆ (19) ವಿರುದ್ಧ 31 ಮತಗಳ ಅಂತರಿಂದ ಜಯ ಗಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಸುರೇಶ್ಚಂದ್ರ ಹೆಗಡೆ (70) ಉಮಾಮಹೇಶ್ವರ ಆಯ್ಕೆಯಾಗಿದ್ದಾರೆ.

ಹೆಗಡೆ (14) ವಿರುದ್ಧ 56 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಸಿದ್ದಾಪುರ, ಹೊನ್ನಾವರ ಮತ್ತು ಭಟ್ಕಳ ತಾಲೂಕು ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಪರಶುರಾಮ ವೀರಭದ್ರ ನಾಯ್ಕ (37) ಅವರು ಸಾಧನಾ ರಾಜೇಶ ಭಟ್ಟ (27) ವಿರುದ್ಧ 10 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಯಲ್ಲಾಪುರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೊಯಿಡಾ ಮತ್ತು ಕಾರವಾರ ತಾಲೂಕು ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಶಂಕರ ಪರಮೇಶ್ವರ ಹೆಗಡೆ (66) ಅವರು ಪ್ರಶಾಂತ ಸುಬ್ರಾಯ ಸಭಾಹಿತರ ವಿರುದ್ಧ 42 ಮತಗಳ ಅಂತರದಲ್ಲಿ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ 8 ಮತಕ್ಷೇತ್ರಗಳ ಒಟ್ಟು 555 ಮತದಾರರ ಪೈಕಿ 546 ಜನರು ಮತ ಚಲಾಯಿಸಿದರು. ಈ ಪೈಕಿ 1 ಕುಲಗೆಟ್ಟರೆ, ಉಳಿದ ಮತಗಳು ಸಿಂಧುತ್ವ ಹೊಂದಿದ್ದವು. ನಿರ್ದೇಶಕರ ಆಯ್ಕೆಯಾದ 15 ದಿನಗಳಲ್ಲಿ ಅಧ್ಯಕ್ಷರ ಆಯ್ಕೆ ಮಾಡುವ ನಿಯಮದ ಹಿನ್ನೆಲೆಯಲ್ಲಿ ಅಧ್ಯಕ್ಷ ಗಾದಿಗೆ ಏರಲು ಈಗಾಗಲೇ ಕಸರತ್ತು ಶುರುವಾಗಿದೆ. ಇದುವರೆಗೆ ಅಧ್ಯಕ್ಷರಾಗಿದ್ದ ಶಂಕರ ಮುಗದ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬೇಕಿರುವಷ್ಟು ಮತಗಳ ಸಂಖ್ಯೆಯಷ್ಟು ಬಿಜೆಪಿ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿರುವುದರಿಂದ ಬಿಜೆಪಿ ಕೆಎಂಎಫ್ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾದಂತಾಗಿದೆ. ಆದರೆ, ಈಗಾಗಲೇ ಅಧ್ಯಕ್ಷರಾಗಿ ಅಧಿಕಾರ ನಡೆಸಿದ ಅನುಭವ ಹೊಂದಿರುವ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ನೀಲಕಂಠ ಅಸೂಟಿ ಅವರು ಸಹ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸದೆ ಇರಲಾರರು. ಆದರೆ, ಸರಳ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ. ಹೀಗಾಗಿ, ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

WhatsApp Group Join Now
Telegram Group Join Now
Share This Article
error: Content is protected !!