ರೈತನ ಗುಡಿಸಲು ತೆರವು
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ
ಕಲಘಟಗಿ: ಜಮೀನಿನಲ್ಲಿ ರೈತರೊಬ್ಬರೂ ಹಾಕಿದ್ದ ಗುಡಿಸಲನ್ನು ತೆರವುಗೊಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಕಳೆದ 65 ವರ್ಷಗಳಿಂದ ತಾಲೂಕಿನ ಕಲಕುಂಡಿ ಗ್ರಾಮದ ರೈತ ಅರ್ಜುಲ ಟುಕ್ರುಲ್ ಎಂಬುವವರು
ಉಳುಮೆ ಮಾಡುತ್ತಾ ಬರುತ್ತಿರುವ ಜಮೀನಿನಲ್ಲಿ ಹಾಕಿದ್ದ ಗುಡಿಸಲನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳ್ಳಿಸಿದ್ದಾರೆ.
ಕಳೆದ 65 ವರ್ಷಗಳಿಂದ ಇದ್ದ ಗುಡಿಸಲನ್ನು
ತಾವು ಇಲ್ಲದ ಸಮಯದಲ್ಲಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ತಾಡಪತ್ರಿ, ಗುದ್ದಲಿ, ಸಲಕಿ ಸೇರಿದಂತೆ ಕೃಷಿಪರಿಕರ ತೆಗೆದುಕೊಂಡು ಹೋಗಿದ್ದಾರೆ. ನ್ಯಾಯ ದೊರಕಿಸಿ ಕೊಡಿ ಎಂದು ತಾಲ್ಲೂಕಿನ ಕಲಕುಂಡಿ ಗ್ರಾಮದ ರೈತ ಅರ್ಜುನ ಟುಕ್ರುಲ್ ಅಳಲು ತೋಡಿಕೊಂಡಿದ್ದಾರೆ.
ನೇಹಾ ಹೆಸರಿನಲ್ಲಿ ಎಸ್ಸಿ ಜಾತಿ ಪ್ರಮಾಣ ಪತ್ರ; ಸಾಮಾಜಿಕ ಜಾಲತಾಣದಲ್ಲಿ ವೈರಲ್