ಹುಬ್ಬಳ್ಳಿ: ಮಜೇಥಿಯಾ ಫೌಂಡೇಶನ್, ಹುಬ್ಬಳ್ಳಿ ಕಳೆದ 1.5 ದಶಕಗಳಿಂದ ಮಾಡಿಕೊಂಡು ಬರುತ್ತಿರುವ ಸೇವಾ ಕಾರ್ಯಗಳ ಜೊತೆಗೆ ಹಿರಿಯರ ನಾಗರಿಕ ಸಮಾಜ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ 2024ನೇ ಸಾಲಿನ “ಸಮಾಜ ಸೇವಾ ವಿಭಾಗʼದ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಪ್ರಶಸ್ತಿಯನ್ನು ನೀಡಿ ಮಜೇಥಿಯಾ ಫೌಂಡೇಶನಿನ್ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.