ಹುಬ್ಬಳ್ಳಿ : ಭಾವೈಕ್ಯತೆ ಮತ್ತು ಐಕ್ಯತೆಯ ಸಾರವಾದ ದಸರಾ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಮನೋರಂಜನೆಗಾಗಿ ಕುರಿಗಳ ಕಾಳಗ ಪ್ರತಿದಿನ ಮುಂಜಾನೆ 2 ಗಂಟೆಗಳ ಕಾಲ ನಡೆಯುತ್ತಿದ್ದು, ಇದನ್ನು ನೋಡಲು ಬರುವ ನೂರಾರು ಪುಟಾಣಿ ಮಕ್ಕಳು ತುಂಬಾ ಆಸಕ್ತಿಯಿಂದ ಕುರಿಗಳ ಕಾಳಗ ನೋಡಿ ಖುಷಿ ಪಟ್ಟುಕೊಳ್ಳುತ್ತಾರೆ,
ಸುಗಮವಾಗಿ ಶಾಂತವಾಗಿ ದೂರ ನಿಂತು ಮಕ್ಕಳು ಕುರಿ ಕಾಳಗ ವನ್ನು ವೀಕ್ಷಿಸುವಂತೆ ಆಯೋಜಕರು ಸೂಕ್ತ ವ್ಯವಸ್ಥೆಯನ್ನು ಕೂಡ ಕಲ್ಪಿಸಿದ್ದಾರೆ.
ಒಟ್ಟಿನಲ್ಲಿ ಈ ಸಲ ದಸರಾ ಹಬ್ಬದ ಮೆರಗು ಹುಬ್ಬಳ್ಳಿಯಲ್ಲಿ ಜೋರಾಗಿ ನಡೆಯುತ್ತಿದೆ.
ವರದಿ; ಲೋಹಿತ್ ಬಸವಾ