ಎಸ್‌ಎಸ್‌ಎಲ್‌ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
ಧಾರವಾಡ: ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ವತಿಯಿಂದ ೨೦೨೩-೨೪ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸುದ್ದಿ ಓದಿ; ಹೆಣ್ಣು ಹುಟ್ಟಿದ್ದಕ್ಕೆ ಪತ್ನಿ ಬಿಟ್ಟ ಭೂಪ !
ಸರ್ಕಾರಿ ಪ್ರೌಢ ಶಾಲಾ ವಿಭಾಗದಲ್ಲಿ ಸುಮಾ ಗರಗ ಜಿಹೆಚ್‌ಎಸ್ ಆರ್ ಎನ್ ಶೆಟ್ಟಿ ಕ್ರೀಡಾಂಗಣ ಪ್ರಥಮ ಶೇ ೯೪.೨೪, ಭಾರತಿ ಬಾಳಗಿ ಜಿಹೆಚ್‌ಎಸ್ ಕಮಲಾಪೂರ ದ್ವಿತೀಯ ೯೩.೪, ಹಫೀಜಾ ಲಕ್ಷ್ಮೇಶ್ವರ ಜಿಯುಹೆಚ್‌ಎಸ್ ಮದಾರಮಡ್ಡಿ ಶೇ ೯೦.೭ ತೃತೀಯ, ಅನುದಾನಿತ ಪ್ರೌಢ ಶಾಲಾ ವಿಭಾಗದಲ್ಲಿ ಅನುಷಾ ಹಾಗೂ ಪಲ್ಲವಿ ಪ್ರಜೆಂಟೇಶನ್ ಬಾಲಿಕಾ ಪ್ರೌಢ ಶಾಲೆ ಶೇ ೯೮.೮ ಜಿಲ್ಲೆಗೆ ಪ್ರಥಮ, ಸ್ಪೂರ್ತಿ ಪ್ರಜೆಂಟೇಶನ್ ಬಾಲಿಕಾ ಪ್ರೌಢ ಶಾಲೆ ಶೇ ೯೮.೦೮, ಬೃಂದಾ ಕೋಳಿ ಪ್ರಜೆಂಟೇಶನ್ ಬಾಲಿಕಾ ಪ್ರೌಢ ಶಾಲೆ ೯೭.೪೪ ತೃತೀಯ, ಅನುದಾನರಹಿತ ವಿಭಾಗದಲ್ಲಿ ಭುವನೇಶ್ವರಿ ಜೆಎಸ್‌ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾಗಿರಿ ಧಾರವಾಡ ಶೇ ೯೮.೩೬ ಪ್ರಥಮ, ಭೂಮಿಕಾ ಕುಲಕರ್ಣಿ ಕೆ ಇ ಬೋರ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಶೇ ೯೭.೭೬ ದ್ವಿತೀಯ, ಗಿರೀಶ ಚಿಕ್ಕಮಠ ಬಿಜಿಎಸ್ ಪ್ರೌಢ ಶಾಲೆ ಹಾಗೂ ಸೃಷ್ಠಿ ಚೆನ್ನಪ್ಪಗೌಡರ ಜೆಎಸ್‌ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ವಿಶಾಂತ ರಾಠೋಡ ಕೆ ಇ ಬೋರ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಶೇ ೯೭.೬ ತೃತೀಯ ಸ್ಥಾನ ಗಳಿಸಿದ ಪ್ರಯುಕ್ತವಾಗಿ ಕ್ಷೇತ್ರ ಶಿಕ್ಷಣಾಕಾರಿಗಳಾದ ಅಶೋಕ ಸಿಂದಗಿ ಸನ್ಮಾನಿಸಿ ಅಭಿನಂದಿಸಿದರು.
ಈ ಸುದ್ದಿ ಓದಿ; ಹೆಣ್ಣು ಹುಟ್ಟಿದ್ದಕ್ಕೆ ಪತ್ನಿ ಬಿಟ್ಟ ಭೂಪ !
ಇದೇ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಕಾಧಿರಿಗಳಾದ ಎಂ ವಿ ಅಡಿವೇರ, ಎಸ್‌ಎಸ್‌ಎಲ್‌ಸಿ ತಾಲೂಕಾ ನೋಡಲ್ ಅಧಿಕಾರಿಗಳಾದ ಕೆ.ಎಫ್. ಜಾವೂರ, ಸರ್ಕಾರಿ ಪ್ರೌಢ ಶಾಲೆಆರ್. ಎನ್. ಶೆಟ್ಟಿ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀದೇವಿ ಲದ್ದಿಮಠ, ಜಿಯುಹೆಚ್‌ಎಸ್ ಮದಾರಮಡ್ಡಿ ಶಾಲೆಯ ಮುಖ್ಯೊಪಾಧ್ಯಾಯರಾದ ಹೆಚ್ ಡಿ ನಾಗಮ್ಮನವರ ಹಾಗೂ ಎಲ್ಲ ಶೈಕ್ಷಣಿಕ ಮೇಲ್ವಿಚಾರಕರು, ವಿದ್ಯಾರ್ಥಿಗಳು, ಪಾಲಕರು, ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಜರಿದ್ದರು.