ಆಟೋಗಳ ಅಟಾಟೋಪಕ್ಕೆ ಬಿಳಬೇಕಿದೆ ಕಡಿವಾಣ
ಹುಬ್ಬಳ್ಳಿ: ಅವಳಿನಗರದಲ್ಲಿ ಕೆಲವು ಆಟೋ ಡ್ರೈವರ್‌ಗಳ ವರ್ತನೆಗೆ ಜನತೆ ಹೈರಾಣಾಗಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಪಾದಚಾರಿಗಳ ಮೇಲೆ ಎಗರುವ ಆಟೋ ಡ್ರೈವರ್‌ಗಳು ನಿಯಮ ಪಾಲಿಸಲು ತಿಳಿಸುವ ಸಾರ್ವಜನಿಕರ ಮೇಲೆ ಜಗಳಕ್ಕೆ ಇಳಿಯುತ್ತಿದ್ದಾರೆ. ಕೆಲವರು ಮಧ್ಯಾಹ್ನದ ವೇಳೆಯಲ್ಲೇ ಮದ್ಯ ಸೇವಿಸಿ ಆಟೋ ಚಲಾಯಿಸುತ್ತಾರೆ. ಹಣದ ವಿಚಾರವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಾರೆ.
ಇಂತಹದ ಒಂದು ಘಟನೆ ಮಂಗಳವಾರ ಯು- ಮಾಲ್ ಬಳಿ ನಡೆದಿದೆ. ಏಕಾಏಕಿ ಎದುರುಗಡೆ ಬಂದ ಎರಡು ಆಟೋಗಳ ಡ್ರೈವರ್‌ಗಳು ಬೈಕ್ ಸವಾರನದ್ದೇ ತಪ್ಪು ಎನ್ನುವಂತೆ ದಾರಿಯಲ್ಲಿ ಅಡ್ಡಗಟ್ಟಿ ಜಗಳಕ್ಕೆ ಇಳದಿದ್ದಾರೆ. ಕೈ ಕೈ ಮಿಲಾಯಿಸಿ ಜಗಳಕ್ಕೆ ಇಳದಿದ್ದಾರೆ. ತಮ್ಮದೆ ತಪ್ಪು ಇದ್ದರೂ ಬೈಕ್ ಸವಾರನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲೇ ಇದ್ದ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಕೆಲವು ಆಟೋಗಳ ಆಟೋಟೋಪಕ್ಕೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.