ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ನಗರದ ವೀರಾಪುರ ಓಣಿಯ ಶ್ರೀ ಮೈಲಾರಲಿಂಗ ದೇವಸ್ಥಾನದ ವತಿಯಿಂದ ದಸರಾ ಹಬ್ಬದ ಅಂಗವಾಗಿ ಭಕ್ತಿಯ ಪ್ರತಿರೂಪವಾದ ಶ್ರೀ ಮೈಲಾರಲಿಂಗ ದೇವರ ಪೂಜಾ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.
ಪವಿತ್ರ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಓಣಿಯ ಗುರು ಹಿರಿಯರು ಮಾತೆಯರು ಯುವಕ ಯುವತಿಯರು ಹಾಗೂ ನೂರಾರು ಸದ್ಭಕ್ತಾದಿಗಳು ಆಗಮಿಸಿ ದೇವರ ಆಶೀರ್ವಾದ ಪಡೆದುಕೊಂಡು ಮಹಾ ಪ್ರಸಾದವನ್ನು ಸ್ವೀಕರಿಸಿದರು , ಸಾಯಂಕಾಲ ಜಿಟಿ ಜಿಟಿ ಮಳೆಯಲ್ಲಿಯೂ ಕೂಡ ನೂರಾರು ಮುತ್ತೈದೆಯರು ಪಲ್ಲಕ್ಕಿ ಮೆರವಣಿಗೆಯಲ್ಲಿ ಆರತಿ ಹಿಡಿದುಕೊಂಡು ಸಾಗಿದರು
ಪುಟಾಣಿ ಮಕ್ಕಳಂತು ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಧರಿಸಿ, ದಸರಾ ಹಬ್ಬದ ಜೈಕಾರಗಳನ್ನು ಹಾಕುತ್ತಾ, ಪಟಾಕಿ ಸಿಡಿಸುವ ಮೂಲಕ ಸಂಭ್ರಮ ಪಟ್ಟಿಕೊಂಡರು,
ಮೈಲಾರಲಿಂಗ ದೇವಸ್ಥಾನದ ವತಿಯಿಂದ ಪವಿತ್ರ ದಸರಾ ಹಬ್ಬದ ನಿಮಿತ್ಯ ಆಯೋಜಿಸಿದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು..
ಈ ಒಂದು ಕಾರ್ಯಕ್ರದಲ್ಲಿ ವೀರಾಪುರ ಓಣಿ ಹಾಗೂ ಮಹಾಬಲೇಶ್ವರ ದೇವಸ್ಥಾನದ ಪ್ರಮುಖರು ಸೇರಿದಂತೆ ಓಣಿಯ ಗುರು ಹಿರಿಯರು ಭಕ್ತರು ಭಾಗವಹಿಸಿದ್ದರು,
ವರದಿ ಲೋಹಿತ ಬಸವಾ