ಹುಬ್ಬಳ್ಳಿ; ತಾಲೂಕಿನ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದ ಇಬ್ಬರ ಶವ ಪತ್ತೆಯಾಗಿವೆ.
ಗದಗ ಮೂಲದ ದೀಪಕ್ ರೋಣದ (21), ಹುಬ್ಬಳ್ಳಿಯ ವಿದ್ಯಾನಗರದ ಲೋಕಪ್ಪನಹಕ್ಕಲ ನಿವಾಸಿ ಮೈಲಾರಿ (24) ಮೃತಪಟ್ಟವರು.
ಏಳು ಜನ ಸ್ನೇಹಿತರು ಬುಧವಾರ ಕೆರೆಯಲ್ಲಿ ಈಜಲು ಹೋಗಿದ್ದರು. ಅದರಲ್ಲಿ ದೀಪಕ್ ಮತ್ತು ಮೈಲಾರಿ ಮುಳುಗಿದ್ದರು. ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದರು. ಈ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.