ಮತದಾನ ಪ್ರಮಾಣ ಶೇ 4.25 ಹೆಚ್ಚಳ’
‘2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಲ್ಲಿ ಶೇ 70.12 ಮತದಾನವಾಗಿತ್ತು, ಈ ಬಾರಿ ಶೇ 74.37 ಮತದಾನವಾಗಿದೆ. ಮತದಾನ ಪ್ರಮಾಣ ಶೇ 4.25 ಹೆಚ್ಚಳವಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.
ಬಿಸಿಲಿನ ಮಧ್ಯೆಯೂ ಮತದಾನದ ಪ್ರಮಾಣ ಹೆಚ್ಚಳವಾಗಿದೆ.
ಮತದಾರರು ಉತ್ಸಾಹದಿಂದ ಹಕ್ಕು ಚಲಾಯಸಿದ್ಧಾರೆ. ಜಿಲ್ಲಾ‘ಸ್ವೀಪ್’ ಸಮಿತಿಯ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸಿಬ್ಬಂದಿ, ಸ್ವಯಂ ಸೇವಕರ ಶ್ರಮಿಸಿದ್ದರಿಂದ ಮತದಾನ ಪ್ರಮಾಣ ಹೆಚ್ಚಳವಾಗಿದೆ. ತಂಡದ ಕಾರ್ಯ ಶ್ಲಾಘನೀಯ ಎಂದು ತಿಳಿಸಿದ್ದಾರೆ.