ಮಕ್ಕಳಿಗೆ ಹಣ್ಣಿನ ಪ್ಯೂರಿ ತಿನ್ನಿಸೋದು ಸಾಮಾನ್ಯ. ಆದರೆ ಎರಡು ವರ್ಷದವರಾಗುತ್ತಾ ಪ್ಯೂರಿ ಬದಲು ಇಡೀ ಹಣ್ಣನ್ನೇ ಮಕ್ಕಳಿಗೆ ಕೊಡಿ. ಅದನ್ನು ಜ್ಯೂಸ್ ರೂಪದಲ್ಲಿ ನೀಡಬೇಡಿ. ಯಾಕೆ ಗೊತ್ತಾ?
ಹಣ್ಣಿನಲ್ಲಿ ಸಕ್ಕರೆ ಅಂಶ ಇದ್ದೇ ಇರುತ್ತದೆ. ಹಣ್ಣನ್ನು ಇಡಿಯಾಗಿ ತಿಂದರೆ ಅದರಲ್ಲಿ ಮೈಕ್ರೋ ನ್ಯೂಟ್ರಿಯಂಟ್ಸ್ ಹಾಗೂ ಫೈಬರ್ ಸಿಗುತ್ತದೆ. ನೀವು ಮಿಕ್ಸಿ ಮಾಡಿ ಬರೀ ರಸ ಕುಡಿದರೆ ಅದು ಬರೀ ಸಕ್ಕರೆಯಾಗಿರುತ್ತದೆ. ಸಕ್ಕರೆ ಹಾಗೂ ನೀರು ಕುಡಿದಂತೆ ಆಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.