- ವಿದ್ಯಾರ್ಥಿಗಳಿಂದ ಯೋಗಾಭ್ಯಾಸ
ಗಜೇಂದ್ರಗಡ; ಪಟ್ಟಣದ ಶ್ರೀ ಜಗದಂಬಾ ವಿದ್ಯಾ ವರ್ಧಕ ಸಂಘ(ರಿ) ಶ್ರೀ ವಿ. ಟಿ ರಾಯಬಾಗಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನ
ಆಚರಣೆ ಮಾಡಲಾಯಿತು.
ಶಾಲೆಯ ಅಧ್ಯಕ್ಷರಾದ ಕೆ. ಎಸ್. ಪವಾರ ಅವರು ಸಸಿಗೆ ನೀರೆರಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯೋಗ ತರಬೇತಿದಾರರಾದ ಪಂಕಜ ಕುಮಾರ ಅವರು ಯೋಗ ಆಸನಗಳನ್ನು ಉತ್ತಮವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಯೋಗ ಅಮೃತವೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿಯವರಾದ ಉಪಾಧ್ಯಕ್ಷರಾದ ಎ.ಬಿ ರಾಯಬಾಗಿ, ಕಾರ್ಯದರ್ಶಿಗಳಾದ ಗುರುನಾಥ ರಾಯಬಾಗಿ, ಸಹಕಾರ್ಯದರ್ಶಿಗಳಾದ ಶ್ರೀ ಭಾಸ್ಕರ ರಾಯಬಾಗಿ, ಎಸ್. ಎಸ್. ರಾಯಬಾಗಿ, ಜಿ.ಹೆಚ್ ರಂಗ್ರೇಜ್, ಶ್ರೀ ಎಸ್. ಕೆ ರಾಯಬಾಗಿ ಹಾಗೂ ಆಡಳಿತಾಧಿಕಾರಿಗಳಾದ ಶ್ರೀ ಗೋವಿಂದ ದಂಡೀನ, ಶಿಕ್ಷಕರು/ಶಿಕ್ಷಕಿಯರು ಉಪಸ್ಥಿತರಿದ್ದರು.