ನ.10ರಂದು ಅಖಿಲ ಭಾರತೀಯ ಗೋ ದಿವಸ
ನಮ್ಮ ಸಂಸ್ಕೃತಿಯಲ್ಲಿ, ।। ಸರ್ವೇ ದೇವಃ ಸ್ಥಿತಃ ದೇಹ ಸರ್ವ ದೇವ ಮರ್ಯ ಗೌ ।। 33 ಕೋಟಿ ದೇವಾನು ದೇವತೆಗಳು ಹಸುವಿನ ದೇಹದಲ್ಲಿ ದೇವರು ವಾಸಿಸುತ್ತಾರೆ.
ನಂಬಿ, ಭಕ್ತಿಭಾವದಿಂದ ಪೂಜಿಸಿ, ತಾಯಿಯ ಸ್ಥಾನ ನೀಡಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ದಾರಿಯಲ್ಲಿ ಮಲಗಿರುವದನ್ನು, ಆಹಾರ ಕಸದ ರಾಶಿಯಿಂದ ತಿನ್ನುವದನ್ನು, ವಾಹನಗಳಿಗೆ ತಾಗಿ ಗಾಯವಾಗುವದನ್ನು, ಅನಾರೋಗ್ಯದಿಂದ ಬಳಲುತ್ತಿರುವ ದೃಶ್ಯ ನೋಡುತ್ತ ಮೂಕ ಪ್ರೇಕ್ಷಕ ರಾಗಿದ್ದೇವೆ. ಹಾಗಾದರೆ ಪೂಜಿಸಲ್ಪಡುವ ಗೋಮಾತೆಗೆ ಆಶ್ರಯ ಸ್ಥಳವೇ ಇಲ್ಲವೇ ? ಮೂಕ ಪ್ರಾಣಿಗಳ ಜೀವನ ಸ್ಥಿತಿ ಬದಲಾಯಿಸಲು ಮಾರ್ಗವಿಲ್ಲವೇ ?
ಉತ್ತರ ಕರ್ನಾಟಕದಲ್ಲಿ ಗೋಸಂರಕ್ಷಣೆ ಪುನಶ್ಚೇತನ.
ಉತ್ತರ ಭಾರತಕ್ಕಿಂತ, ದಕ್ಷಿಣ ಭಾರತದಲ್ಲಿ ಗೋಶಾಲೆಗಳು ಅತೀ ವಿರಳ, ಅದರಲ್ಲೂ ನಮ್ಮ ಉತ್ತರ ಕರ್ನಾಟಕದಲ್ಲೂ ಕಾಣುವದೇ ಅಪರೂಪ. ಉತ್ತರ ಭಾರತದಲಾದರೂ ಸಂಘ ಸಂಸ್ಥೆಗಳು, ಸರ್ಕಾರಿ ಪಶುಸಂಗೋಪನಾ ಇಲಾಖೆ, ದತ್ತಿ ಸಂಸ್ಥೆಗಳು ದೇವಸ್ಥಾನ ನಿಗಮ ಮಂಡಳಿ ವತಿಯಿಂದ ನಿರಾಶ್ರಿತ, ಅನಾರೋಗ್ಯಕ್ಕೀಡಾದ, ವಯಸ್ಸಾದಂಥ ಹಸುಗಳನ್ನು ಆರೈಕೆಮಾಡಿ, ಕಾಲವಾಗುವರೆಗೆ ಉತ್ತಮವಾಗಿ ಪೋಷಿಸುವ ಮತ್ತು ಅವುಗಳಿಂದ ಬರುವ ಹಾಲು, ಸಗಣಿ ಮತ್ತು ಗೋ ಮೂತ್ರವನ್ನು ಯಾವುದೇ ಆದಾಯ ಮಾಡದೆ ಕೇವಲ ಪೋಷಣೆ ಮತ್ತು ಸೇವೆಗಾಗಿವೆ. ಇಂತಹ ಗೋಶಾಲೆಗಳು ನಮ್ಮ ಉತ್ತರ ಕರ್ನಾಟಕದಲ್ಲೇಕೆ ಇಲ್ಲ ಎನ್ನುವ ಪ್ರಶ್ನೆ, ಅವುಗಳ ಆರೈಕೆಯಲ್ಲಿ ನಾವುಗಳು ಮಾನವೀಯತೆಯನ್ನೇ ಮರೆತಿದ್ದೇವೆ ಎಂದರೆ ತಪ್ಪಾಗಲಾರದು.
ಗೋಪಾಷ್ಟಮಿಯ ಆಚರಣೆ !
ಪ್ರತಿಯೊಂದು ಹಬ್ಬವೂ ಅದರದೇ ಒಂದು ಮಹತ್ವ, ಅದರಲ್ಲಿ ಗೋಪಲಾಷ್ಟಮಿ ಕೂಡ ಒಂದು, ಕಾರ್ತಿಕ ಮಾಸದ ಎಂಟನೆಯ ಚಂದ್ರನ ದಿನವೇ ಗೋಪಾಷ್ಟಮಿ, ಉದ್ದೇಶ ಗೋವುಗಳ ರಕ್ಷಣೆ ಮತ್ತು ಪೋಷಣೆ ಮಾಡುವದಾಗಿದೆ. ಹಸುಗಳಿಗೆ ಸ್ನಾನ ಮಾಡಿಸಿ, ಅಲಂಕರಿಸಿ, ಪೂಜಿಸಿ, ಮೇವಿನ ಜೊತೆಗೆ ವಿಶಿಷ್ಟ ಭಕ್ಷ್ಯ ನೀಡಿ, ಹಸುಗಳನ್ನು ಹೊರಗಡೆ ಮೇಯಿಸಲು ಬಿಟ್ಟು, ಸಂಜೆ ಗೋಧೂಳಿ ಸಮಯದಲ್ಲಿ ಹಿಂತಿರುಗಿದಾಗ ಪೂಜಿಸಿ, ಪಾದ ಕಮಲಗಳನ್ನು ಸ್ಪರ್ಶಿಸಿ, ಗೋಮಾತೆಯಿಂದ ಸಮೃದ್ಧಿಗಾಗಿ ಪ್ರಾರ್ಥನೆ ಮಾಡಿ, ಯಥಾಶಕ್ತಿ ದಾನ ನೀಡುವ ಪ್ರಕ್ರಿಯೆ ಈ ಗೋಪಾಲಾಷ್ಟಮಿ.
ಗೋಪಾಷ್ಟಮಿಯ ಹಿನ್ನಲೆ ;
ಭಾಗವತ ಪುರಾಣದಲ್ಲಿ ಶ್ರೀ ಕೃಷ್ಣನ ಕಾಲಕ್ಷೇಪಗಳನ್ನು ಯುಗಗಳಾಗಿ ನೋಡಿದಾಗ, ನಂದ ಮಹಾರಾಜರ ಮಕ್ಕಳಾದ ಕೃಷ್ಣ ಮತ್ತು ಬಲರಾಮರನ್ನು ಮೊದಲ ಬಾರಿಗೆ ಹಸುಗಳನ್ನು ಮೇಯಿಸಲು ಕಳುಹಿಸಿದ ದಿನ, ಅಂದರೆ ಪೌಗಂಡನ ಯುಗದ ವರೆಗೆ ಕೃಷ್ಣನು ಕರುವನ್ನು ಕಾಯುತ್ತಿದ್ದು, ಕುಮಾರ ಯುಗದಕ್ಕೆ ಕಾಲಿಟ್ಟ ನಂತರ ಗೋವುಗಳನ್ನು ಮೇಯಿಸಲು ಪ್ರಾರಂಭಿಸಿದ, ಈ ದಿನವೇ ಗೋಪಾಷ್ಟಮಿಯೆಂದು
ಗೋಪಾಷ್ಟಮಿಯ ಪ್ರಾಮುಖ್ಯತೆ :
ಶ್ರೀ ಕೃಷ್ಣನ ಎಲ್ಲಾ ಕಾಲಕ್ಷೇಪಗಳಲ್ಲಿ ಗೋಪಾಷ್ಟಮಿ ಅತ್ಯಂತ ಪ್ರಮುಖ. ಶ್ರೀ ಕೃಷ್ಣನು ಹಸುಗಳಿಗಿರುವ ಕಾಳಜಿ, ಪ್ರೀತಿ ಮತ್ತು ರಕ್ಷಣೆಯ ವಾತಾವರಣವನ್ನು ಒದಗಿಸಲು ಪ್ರಯತ್ನಿಸಬೇಕೆಂಬ ಸಂಪ್ರದಾಯ. ಇದರಿಂದ ಗೋಮಾತೆಯ ಕೃಪಾಕಟಾಕ್ಷ ದಿಂದ ಶ್ರೀಹರಿಯ ಕೃಪೆಯಿರುತ್ತದೆ ಎಂದು.
ನನ್ನ ಸಾತ್ವಿಕ ಅಭಿಯಾನ ಮುಂದುವರೆಯಲಿದೆ :
ಗೋವುಗಳ ಬಗ್ಗೆ ನನಗೆ ಅಪಾರ ದಯೆ ಮತ್ತು ಅಂತಕರಣ. ಗೋವುಗಳ ಪೂಜೆ ನೆರವೇರಿಸುವು ನಮ್ಮ ಪರಿವಾರದ ಸಂಪ್ರದಾಯ. ಗೋವುಗಳಿಗೆ ಮೇವು ಮತ್ತು ಅವಶ್ಯಕವಾದ ಸಹಾಯ ದಶಕಗಳಿಂದ ಮಾಡುತ್ತ ಬಂದಿದ್ದೆನೆ. ಗೋಶಾಲೆ ನಿರ್ಮಿಸಬೇಕೆಂಬ ಮಹದಾಸೆ ಇದ್ದಿತ್ತು, ಅದೃಷ್ಟ ದಿಂದ 2017 ರಲ್ಲಿ ‘ನಾರಾಯಣ ಗೋ ಸೇವಾ ಟ್ರಸ್ಟ’ ಇವರಿಗೆ ಗೋಶಾಲೆ ನಿರ್ಮಾಣಕ್ಕಾಗಿ, ಅಂಚಟಗೇರಿ ಗ್ರಾಮದ ಹತ್ತಿರವಿರುವ ನಮ್ಮ ಕೃಷಿಭೂಮಿಯಲ್ಲಿರುವ ನಾಗೇಶ್ವರ ದೇವಸ್ಥಾನದ ಪಕ್ಕದಲ್ಲೇ, ಒಂದು ಎಕರೆ ಭೂಮಿಯನ್ನು ನೀಡಿದ್ದೇನೆ, ಇಂದಿಗೆ ಅದು ಸುಸಜ್ಜಿತ ಗೋಶಾಲೆ ತಲೆಯೆತ್ತುವಂತಾಗಿದೆ. ಸುಮಾರು 10 ಕರುಗಳು ಮತ್ತು 50 ಕ್ಕಿಂತ ಹೆಚ್ಚು ನಿರಾಶ್ರಿತ, ಅನಾರೋಗ್ಯ ಪೀಡಿತ ಮತ್ತು ವಯಸ್ಸಾದ ಹಸುಗಳ ಪಾಲನೆ-ಪೋಷಣೆ ಮಾಡಲಾಗುತ್ತಿದೆ. ಇದರಿಂದ ನನಗೆ ಅಲ್ಪ ಮಟ್ಟಿಗೆ ಸಮಾಧಾನ ತಂದಿದೆ.
ಮುಂದಿನ ದಿನಗಳಲ್ಲಿ ಹಸು ಪ್ರವಾಸೋದ್ಯಮ, ಹಸು ಚಿಕಿತ್ಸೆ (Cow Therapy), ಗ್ರಾಮೀಣ ಮಕ್ಕಳಿಗಾಗಿ ಉದ್ಯಾನವನಗಳಂತಹ ವಿನೂತನ ಯೋಜನೆ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಅನುಷ್ಠಾನ ಗೊಳಿಸುವ ಉದ್ದೇಶವಿದೆ.
◘ಹಸು ಪ್ರವಾಸವು, ಪ್ರವಾಸಿಗರನ್ನು ಸಾಂಪ್ರದಾಯಿಕ ಆಹಾರ, ಕರಕುಶಲ, ಸಂಸ್ಕೃತಿ, ಎತ್ತಿನ ಗಾಡಿ ಸವಾರಿ, ಹೈನುಗಾರಿಕೆ ಮುಂತಾದ ಗ್ರಾಮೀಣ ಚಟುವಟಿಕೆಗಳ ಪ್ರವಾಸಿ ತಾಣ.
◘ಗ್ರಾಮೀಣ ಮಕ್ಕಳಿಗಾಗಿ ಮನರಂಜನೆ – ಅಂಚಟಗೇರಿ ಸುತ್ತ ಮುತ್ತ ಹಳ್ಳಿಯ ಮಕ್ಕಳಿಗಾಗಿ, ನಗರದ ರೀತಿಯ ಸುಸಜ್ಜಿತ ಉದ್ಯಾನವನ ಒದಗಿಸುವ ಯೋಜನೆ
◘ಹಸು ಚಿಕಿತ್ಸೆ, ಇಂದಿನ ದಿನಗಳಲ್ಲಿ ಜನರ ಮಾನಸಿಕ ಒತ್ತಡ, ಖಿನ್ನತೆ, ಬಿಪಿ, ಆತಂಕ ಗಳಂತಹ ಕಾಯಿಲೆಗಳಿಗೆ ಹಸು ಚಿಕಿತ್ಸೆ ಪಡೆದು, ಜನರು ವಿಶ್ರಾಂತಿಯ ಭಾವನೆಯನ್ನು ಅನುಭವಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪರಣಾಮಕಾರಿಯಾಗುತ್ತಲಿದೆ, ಇತರಹದ ವಿಶಿಷ್ಟ ಯೋಜನೆ ಅನುಷ್ಠಾನ ಗೊಳಿಸುವ ಯೋಜನಗಳಿವೆ.
ಬನ್ನಿ ನಾವೆಲ್ಲರೂ ಗೋವುಗಳ ರಕ್ಷಣೆಗಾಗಿ ಮುಂಬರುವ ದಿನಗಳಲ್ಲಾದರೂ ಒಂದಿಷ್ಟು ಸೇವೆಯನ್ನು ಮಾಡೋಣ. ಗೋವುಗಳಿಗೆ ಪೋಷಿಸಿ, ಮಾನವೀಯತೆಯ ಮೌಲ್ಯದ ಜೊತೆಗೆ ಮತ್ತು ಭಗವಂತನ ಕೃಪೆಯನ್ನು ಪಡೆಯೋಣ. ।। ಲೋಕಾಃ ಸಮಸ್ತಃ ಸುಖಿನೋ ಭವಂತು ।।
💎 ಮಜೇಥಿಯಾ, ಮಜೇಥಿಯಾ ಪೌಂಢೇಷನ್