ನಿಖರವಾದ ಸಾಕ್ಷಿ ಸಂಗ್ರಹಿಸಿ
ಹುಬ್ಬಳ್ಳಿ: ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಸೋಮವಾರ ನಗರಕ್ಕೆ ಭೇಟಿ ನೀಡುವ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.
ದೇಶದ ಗಮನ ಸೆಳೆದಿದ್ದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಮಾಡಿದ ಪ್ರಕರಣ ನಿಮಿತ್ತ ಸೋಮವಾರ ನಗರಕ್ಕೆ ಭೇಟಿ ನೀಡಿದ ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಸಿಐಡಿ ಎಸ್ಪಿ ವೆಂಕಟೇಶ ನೇತೃತ್ವದ ತಂಡಕ್ಕೆ ನಿಖರವಾದ ಸಾಕ್ಷಿ ಸಂಗ್ರಹಿಸಲು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ .ವೈಜ್ಞಾನಿಕ ಸಾಕ್ಷಿ ಸಂಗ್ರಹಕ್ಕೆ ಒತ್ತು ನೀಡಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಂಜಲಿ ಮನೆಗೆ ಭೇಟಿ: ಇಲ್ಲಿಯ ವೀರಾಪುರ ಓಣಿ ಮೃತ ಅಂಜಲಿ ಮನೆಗೆ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಅವರು ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು.