ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹ
ಹುಬ್ಬಳ್ಳಿ : ಕರ್ನಾಟಕ ನೆಲದ ಮಕ್ಕಳ ಬದುಕು ಹಸನು ಮಾಡಲು ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಶೀಘ್ರ ಜಾರಿಗೆ ತರುವಂತೆ ಆಗ್ರಹಿಸಿ ನಗರದಲ್ಲಿಂದು ನಮ್ಮ ಕರ್ನಾಟಕ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನಡೆಸಿದ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಅಮೃತ ಇಜಾರಿ ಅವರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ದೇವರಮನಿ, ರಂಗನಾಥ ಕನಕಿ, ಪಾಂಡುರಂಗ ಬಾಂಡಗೆ, ಶೀತಲ ಮಲಗಾವಿ, ಎನ್.ಎಚ್. ಪಾಟೀಲ, ಬಸವರಾಜ ಸಾಲಿ, ಹಿತೇಶ ರಾಠೋಡ, ಅನೀಲ ಶೆಟ್ಟರ, ಸಿದ್ದು ಸಫಾರೆ, ಮನೋಹರ ಸಫಾರೆ, ನಿಖಿಲೇಶ ಐವರ, ಕಾರ್ತೀಕ ಕಂಟಿಗೊಂಡ ಸೇರಿದಂತೆ ಅನೇಕರಿದ್ದರು.