Ad imageAd image

ವೃದ್ಧನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ

Hubballi Dhwani
ವೃದ್ಧನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ
WhatsApp Group Join Now
Telegram Group Join Now

ವೃದ್ಧನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ

ಬೀದರ: ವೃದ್ಧನಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆದ ಘಟನೆ ಹುಲಸೂರು ಸಮೀಪದ ಭಾಲ್ಕಿ ತಾಲೂಕಿನ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
೬೫ ವರ್ಷದ ವೃದ್ಧ ೧೪ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಮಾಡಿ ಜೈಲು ಸೇರಿದ್ದಾನೆ.
ಗ್ರಾಮದ ಭೀಮಾ ತಂದೆ ನರಸಿಂಗರಾವ ಸೂರ್ಯವಂಶಿ(೬೫) ಆರೋಪಿ.
ಆರೋಪಿಯ ಮನೆಯ ಪಕ್ಕ ಅಪ್ರಾಪ್ತ ವಯಸ್ಸಿನ ಬಾಲಕಿಯ ಚಿಕ್ಕಮ್ಮನ ಮನೆ ಆಗಿದ್ದು, ಆಗಾಗ ಬಾಲಕಿ ಚಿಕ್ಕಮ್ಮನ ಮನೆಗೆ ಬರುತ್ತಿದ್ದಳು. ಯಾರು ಇಲ್ಲದ ಸಮಯದಲ್ಲಿ ಪುಸಲಾಯಿಸಿ ನಿರಂತರ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ ಏಳು ತಿಂಗಳ ಗರ್ಭಿಣಿಯಾಗಿದ್ದು , ಆರೋಪಿಯನ್ನು ಪೊಲೀಸರು ಬಂಸಿದ್ದಾರೆ. ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿ ವೈ ಎಸ್ ಪಿ ಪಾವಡಶೆಟ್ಟಿ, ಸಿಪಿಐ ಜಿ.ಎಸ್ ಬಿರಾದಾರ, ಪಿ ಎಸ್ ಐ ಮಾಣಿಕಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!