ಗದಗ: ಎಸ್ಎಸ್ಕೆ ಸಮಾಜದಿಂದ ನಗರದ ಹಳೇ ಸರಾಫ್ ಬಜಾರದಲ್ಲಿರುವ ಜಗದಂಬಾ ದೇವಸ್ಥಾನದಲ್ಲಿ ನಡೆಯಲಿರುವ ನಾಡಹಬ್ಬ ನಮ್ಮೂರ ದಸರಾ ಉತ್ಸವ-೨೦೨೪ ಕಾರ್ಯಕ್ರಮಕ್ಕೆ ಗದಗ ಜಿಲ್ಲಾಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಭರತ್ ಎಸ್. ಅವರಿಗೆ ಅಮಂತ್ರಣ ನೀಡಲಾಯಿತು.
ನಾಡಹಬ್ಬ ನಮ್ಮೂರ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ ೧೦ ರಂದು ಗುರುವಾರ ಬೆಳಿಗ್ಗೆ ೭ ಗಂಟೆಗೆ ನಡೆಯಲಿರುವ ನಾಡಹಬ್ಬ ನಮ್ಮೂರ ದಸರಾ ದರಬಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಮಂತ್ರಣ ಪತ್ರಿಕೆ ನೀಡಿ ಅಹ್ವಾನಿಸಲಾಯಿತು.
ಇದೇ ಸಂದರ್ಭದಲ್ಲಿ ಎಸ್ಎಸ್ಕೆ ಸಮಾಜದ ವತಿಯಿಂದ ಹಿಂದಿನಿಂದ ನಡೆದುಕೊಂಡು ಬಂದ ನಮ್ಮೂರ ದಸರಾ ದರಬಾರ ಕುರಿತು ಪಂಚ ಕಮೀಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಗದಗ ಎಸ್ಎಸ್ಕೆ ಸಮಾಜದ ಪಂಚ ಕಮೀಟಿ ಅಧ್ಯಕ್ಷರಾದ ಫಕೀರಸಾ ಬಾಂಡಗೆ, ನಮ್ಮೂರ ದಸರಾ-೨೦೨೪ ರ ಸಮೀತಿ ಚೇರಮನ್ರಾದ ವಿಷ್ಣುಸಾ ಶಿದ್ಲಿಂಗ, ವೈಯಿಸ್ ಚೇರಮನ್ರಾದ ಸಾಗರ ಪವಾರ, ವಿಶ್ವನಾಥಸಾ ಸೋಳಂಕಿ, ಕಾರ್ಯದರ್ಶಿ ರಾಘವೇಂದ್ರ ಬಾಂಡಗೆ, ಖಜಾಂಚಿ ಸತೀಶ ದವಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.