Ad imageAd image

ನಕಲಿ ಪೊಲೀಸ್ ಬೆದರಿಕೆಗೆ ಕೋಟಿ ಕಳೆದುಕೊಂಡ ಸ್ವಾಮೀಜಿ

Hubballi Dhwani
ನಕಲಿ ಪೊಲೀಸ್ ಬೆದರಿಕೆಗೆ ಕೋಟಿ ಕಳೆದುಕೊಂಡ ಸ್ವಾಮೀಜಿ
WhatsApp Group Join Now
Telegram Group Join Now

ನಕಲಿ ಪೊಲೀಸ್ ಬೆದರಿಕೆಗೆ ಕೋಟಿ ಕಳೆದುಕೊಂಡ ಸ್ವಾಮೀಜಿ

ಬಾಗಲಕೋಟೆ: ನಕಲಿ ಪೊಲೀಸರ ಜಾಲದ ವಂಚನೆಗೆ ಒಳಗಾಗಿ ಗೌಪ್ಯಸ್ಥಳಕ್ಕೆ ಹೋಗಿದ್ದ ಸೀಮಿಕೇರಿ ಪುನರ್ವಸತಿ ಕೇಂದ್ರದ ರಾಮಾರೂಢ ಮಠದ ಶ್ರೀಪರಮಹಂಸ ಪರಮಾರೂಢ ಸ್ವಾಮೀಜಿ ರವಿವಾರ ಮಠದಲ್ಲಿ ಕಾಣಿಸಿಕೊಂಡಿದ್ದಾರೆ.

ನಡೆದದ್ದು ಏನು; ಮೋಸದ ಜಾಲಕ್ಕೆ ಒಳಗಾಗಿ 1 ಕೋಟಿ ರೂ. ಕಳೆದುಕೊಂಡಿರುವುದಕ್ಕೆ ಪಶ್ಚಾತ್ತಾಪದ ಭಾವದಲ್ಲಿ ಕಣ್ಣೀರಿಟ್ಟಿದ್ದಾರೆ. ಸ್ವಾಮೀಜಿಗೆ ಜೆಡಿಎಸ್ ಮುಖಂಡ ಪ್ರಕಾಶ ಮುಧೋಳ ಎಂಬಾತ ತಾನು ಡಿಎಸ್ಪಿ, ಎಡಿಜಿಪಿ ಎಂದೆಲ್ಲ ಬೆದರಿಸಿ ಒಂದು ಕೋಟಿ ರೂ. ನೀಡದಿದ್ದರೆ ಮಾನ ಹರಾಜು ಹಾಕುವ ಬೆದರಿಕೆ ಹಾಕಿದ್ದ. ಅದಕ್ಕೆ ಬೆದರಿದ್ದ ಶ್ರೀಗಳು ಭಕ್ತರಿಂದ ಹಣಕೂಡಿಸಿ ಪ್ರಕಾಶ ಮುಧೋಳನಿಗೆ 1 ಕೋಟಿ ರೂ.ನೀಡಿದ್ದರು. ಆದರೆ ಅದನ್ನೇ ಇಟ್ಟುಕೊಂಡು ಆತ ಮತ್ತೆ ಬ್ಲ್ಯಾಕ್‌ ಮೇಲ್‌ಗೆ ಮುಂದಾದಾಗ ಸ್ವಾಮೀಜಿ ಅಸಲಿ ಪೊಲೀಸರ ಮೊರೆ ಹೋಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಪೊಲೀಸರು 24 ಗಂಟೆಯಲ್ಲಿ ಆರೋಪಿ ಪ್ರಕಾಶನನ್ನು ಹಿಡಿದು ತಂದಿದ್ದಾರೆ.

ರವಿವಾರ ಮಠದಲ್ಲಿ ಪ್ರತ್ಯಕ್ಷರಾದ ಸ್ವಾಮೀಜಿ, ಪ್ರಕಾಶನ ಸಮ್ಮೋಹನ(ಹಿಪ್ಪಾಟಿಸಂ)ಕ್ಕೆ ಒಳಗಾಗಿ ನಾನು ಮೋಸ ಹೋಗಿದ್ದೇನೆ. ನನ್ನ ಕುರಿತಾದ ಯಾವ

ನನ್ನ ಬಗ್ಗೆ ಆರೋಪ ಹೊರಿಸಲಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ. ಆರೋಪಿ ಪ್ರಕಾಶ ಮುಧೋಳ ನನಗೆ ಪರಿಚಯವೇ ಇಲ್ಲ ಆತ ಘಟನೆ ನಡೆಯುವ ಎರಡೂರು ದಿನದ ಮೊದಲು ಮಠಕ್ಕೆ ಆಗಮಿಸಿದ್ದ, ನಾನು ಕಳೆದ ಒಂದೊವರೆ ವರ್ಷದಿಂದ ಅನಾರೋಗ್ಯಕ್ಕೆ ಈಡಾಗಿದ್ದು, ಮಠದಿಂದ ಹೊರಗೂ ಬಂದಿಲ್ಲ. ಅಂದು ನನ್ನ ಆರೋಗ್ಯ ವಿಚಾರಿಸಿ ಹೋಗಿದ್ದ ನಾನು ಯಾರೋ ಭಕ್ತ ಎಂದು ಭಾವಿಸಿದ್ದೆ. ಮುಂದೆ ಎರಡೂರು ದಿನ ಬಿಟ್ಟು ನನಗೆ ಬೆಂಗಳೂರಿನ ಶೇಷಾದ್ರಿಪುರದ ಡಿವೈಎಸ್‌ಪಿ ಗಿರೀಶ ಮಾತನಾಡುವುದು ಎಂದು ಕರೆ ಬಂದಿತು.

ಜೀವ ಬೆದರಿಕೆ….

ಇವರು ಮಾನ ಹರಾಜು ಅಲ್ಲದೇ ಜೀವ ತೆಗೆಯುವ ಬೆದರಿಕೆ ಇಟ್ಟು ಪೊಲೀಸರೂ ಮಠದ ಮುಂದೆ ಬಂದು ನಿಂತಾಗ ಭಯಭೀತನಾಗಿದ್ದೆ. ಈ ವಿಚಾರವನ್ನೂ ಯಾರಿಗೂ ತಿಳಿಸುವಂತಿಲ್ಲ ಎಂದು ಮೂರು ತಲೆಮಾರಿನ ಮಠದ ಪರಂಪರೆ ಮಣ್ಣಾಗುವುದು ಬೇಡ ಕುಳಿತು ಸಹನೆಯಿಂದ ಯೋಚಿಸಲು ಅವರ ಬೇಡಿಕೆಯಂತೆ ಭಕ್ತರ ಬಳಿ ಕೈಯೊಡಿದ್ದಾಗ 6 ಗಂಟೆಗಳಲ್ಲಿ 65 ಲಕ್ಷ ಹಣ ಸೇರಿತು. ಅದನ್ನೂ ಸೇರಿ 1 ಕೋಟಿ ರೂ.ಗಳನ್ನು ಆರೋಪಿಗಳಿಗೆ ನೀಡಿದ್ದೆ ಮುಂದೆ ಈ ವಿಚಾರಗಳನ್ನು ಭಕ್ತರಿಗೆ ತಿಳಿಸದೆ ಇರಲು ಮನಸ್ಸು ಸಹ ಒಪ್ಪಲಿಲ್ಲ. ಮುಂದೆ ಸಿಇಎನ್ ಠಾಣೆ ಸಿಪಿಐ ನಾಗರೆಡ್ಡಿ ಅವರನ್ನು ಭೇಟಿಯಾದಾಗ ಅವರು ಎಸ್‌ಪಿ ಅಮರನಾಥ ರೆಡ್ಡಿ ಅವರ ಬಳಿಗೆ ಕರೆದೊಯ್ದರು. ನೀವು ತಪ್ಪು ಮಾಡಿಲ್ಲ ಎಂದಾದರೆ ಭಯ ಬೇಡ ಎಂದು ಅವರು ಅಭಯ ನೀಡಿದರು. ಎಎಸ್‌ಪಿ ಮಹಾಂತೇಶ್ವರ ಜಿದ್ದಿ, ಸಿಇಎನ್ ಡಿವೈಎಸ್‌ಪಿ ಗಂಗಲ್ ಅವರೂ ಸಹ ಕುಗ್ಗಿದ ನನಗೆ ನ್ಯಾಯ ಕೊಡಿಸಿದ್ದಾರೆ. ಇವರೆಲ್ಲರೂ ನನ್ನ ಪಾಲಿಗೆ ಪ್ರತ್ಯಕ್ಷ ದೇವರಾಗಿದ್ದಾರೆ ಎಂದರು. ಒಂದು ಕೋಟಿ ನಾನು ನೀಡಿದನ್ನು ಗಮನಿಸಿ ಭಕ್ತರಿಗೂ ಏನೋ ಇರಬಹುದು ಎಂಬ ಸಂದೇಹ ಮೂಡಬಹುದು ಈಗಲೂ ಬಹಿರಂಗ ಸವಾಲು ಹಾಕುತ್ತೇನೆ ನನ್ನ ಬಗ್ಗೆ ಅಂಥದ್ದು ಏನಾದರೂ ಇದ್ದರೆ ಯಾರು ಬೇಕಿದ್ದರೂ ಬಹಿರಂಗ ಪಡಿಸಲಿ ಭಕ್ತರ ಮುಂದೆ ನಾನು ಶಿಕ್ಷೆಗೆ ಒಳಗಾಗಲು ಸಿದ್ದ ನಾನು ಹಿಪ್ಪಾಟಿಸಂಗೆ ಒಳಗಾಗಿ ಮೋಸ ಹೋಗಿದ್ದೇನೆ ಎಂದರು.

ಅವಾಜ್ ಹಾಕಲಾಯಿತು. ಮುಂದೆ ಹೈವೇ ಪೊಲೀಸ್ ಜೀಪು ಮಠಕ್ಕೆ ಬಂದು ಎಡಿಜಿಪಿ ಅವರು ಮಾತನಾಡುತ್ತಾರೆ ಎಂದು ಪೊಲೀಸರು ಮೊಬೈಲ್ ಕೈಗಿಟ್ಟಾಗ ಅಕ್ಷರಶಃ ಮೂತ್ರವಿಸರ್ಜನೆ ಮಾಡಿಕೊಂಡಿದ್ದೆ ಎಂದಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!