ಹುಬ್ಬಳ್ಳಿ: ದರೋಡೆಗೆ ಯತ್ನಿಸಿದ ತಂಡದ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದಾಗ ಓರ್ವ ದರೋಡೆಕೋರನ ಕಾಲಿಗೆ ಗುಂಡು ತಗುಲಿದ ಘಟನೆ ಇಂದು ಬೆಳಗಿನ ಜಾವ ರೇವಡಿಹಾಳ ಸೇತುವೆ ಬಳಿ ನಡೆದಿದೆ.
ಬೆಳಗಿನ ಜಾವ 3:00 ಗಂಟೆ ಸುಮಾರಿಗೆ ಗೋಕುಲ ಗ್ರಾಮದಲ್ಲಿ 5-6 ಜನರ ತಂಡವು ರಜನಿಕಾಂತ ದೊಡ್ಡಮನಿ ಎಂಬುವರ ಮನೆಗೆ ನುಗ್ಗಿ ದರೋಡೆಗೆ ಯತ್ನ ನಡೆಸಿದಾಗ ಆ ವೇಳೆ ಮನೆಯವರಿಗೆ ಎಚ್ಚರವಾಗಿ ಗೋಕುಲ ರೋಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯೋನ್ಮುಖರಾದ ಗೋಕುಲ ರೋಡ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ದರೋಡೆಕೋರರನ್ನು ಹಿಡಿಯಲು ಮುಂದಾದಾಗ ಆಗ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನ
ನಡೆದಿದೆ. ಪಿಎಸ್ಐ ಸಚಿನ ದಾಸರೆಡ್ಡಿ ಮೊದಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ನಂತರ ಮಹೇಶ ಸೀತಾರಾಮ ಕಾಳೆ ఎంబ ದರೋಡೆಕೋರನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಇನ್ನುಳಿದ ದರೋಡೆಕೋರರು ಕತ್ತಲಲ್ಲಿ ಪರಾ- ರಿಯಾಗಿದ್ದಾರೆ. ಘಟನೆ ವೇಳೆ ಪಿಎಸ್ಐ ದಾಸರೆಡ್ಡಿ ಮತ್ತು ಹೆಡ್ ಕಾನ್ಸಟೇಬಲ್ ವಸಂತ ಗುಡಗೇರಿ ಅವರು ಗಾಯಗೊಂಡಿದ್ದಾರೆ. ಗುಂಡೇಟು ತಿಂದ ದರೋಡೆಕೋರ ಮತ್ತು ಪೊಲೀಸರು ಸೇರಿ ಮೂವರು ಗಾಯಾಳುಗಳು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.