ಹುಬ್ಬಳ್ಳಿ: ರಾಜ್ಯ ಸರ್ಕಾರ ಮಾಡಿರುವ ಜಾತಿ ಗಣತಿ ಅಲ್ಲ ಅದೊಂದು ಸಾಮಾಜಿಕ ಸಮೀಕ್ಷೆ ಆಗಿದ್ದು ಒಂದು ವೇಳೆ ಸರಕಾರ ಏನಾದರೂ ಅದೊಂದು ಜಾತಿ ಗಣತಿ ಎಂದು ಜಾರಿ ಮಾಡಲು ಹೊರಟರೇ ಅದಕ್ಕೆ ನಾವು ಒಪ್ಪಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಈಗಾಗಲೇ ಲಿಂಗಾಯತ ಸಮಾಜದ ಹಿರಿಯರು ಈ ಬಗ್ಗೆ ತಮ್ಮ ಅಭಿಪ್ರಾಯ ಸಹ ತಿಳಿಸಿದ್ದಾರೆ ತಮ್ಮ ನಿಲುವು ಈ ವಿಚಾರದಲ್ಲಿ ಸ್ಪಷ್ಟವಾಗಿದೆ ಎಂದರು.
ಇನ್ನು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬೇಡಿಕೆ, ಹೋರಾಟ ಹಲವು ವರ್ಷಗಳಿಂದ ಮುಂದುವರಿದಿದ್ದು ಮೀಸಲಾತಿ ಸಿಗುವ ಸಾಧ್ಯತೆ ಇದ್ದು
ಈ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹಕಚೇರಿಯಲ್ಲಿ ಅ. 18ರಂದು ಸಭೆ ಕರೆದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಬೇಡಿಕೆಗೆ ಸಮರ್ಪಕವಾಗಿ ಸ್ಪಂದಿಸಿಲ್ಲ. ಅವರು 2 ಬಾರಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಬೇಡಿಕೆ ಈಡೇರಿಕೆಗಾಗಿ ಸಮಾಜದ ವಕೀಲರೂ ಪ್ರತಿಭಟನೆ ಮಾಡಿದರು. ಇದೀಗ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಅಕ್ಟೋಬರ್ 18ರಂದು ಸಭೆ ಕರೆದಿದ್ದಾರೆ. ನಾನು ಮತ್ತು ಸಮಾಜದ 11 ವಕೀಲರ ನಿಯೋಗ ಸಿಎಂ ಭೇಟಿಗೆ ತೆರಳಲಿದ್ದೇವೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬ ಆಶಾವಾದ ಇದೆ. ಲಿಂಗಾಯತ ಸಮಾಜದ ಎಲ್ಲ ಶಾಸಕರು ಸಭೆಗೆ ಬರಬೇಕು ಎಂದು ಸ್ವಾಮೀಜಿ ಆಹ್ವಾನಿಸಿದರು. ಒಂದು ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯಾ ತಮ್ಮ ಬೇಡಿಕೆ ಈಡೇರಿಸಲು ಸರಿಯಾಗಿ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರೇ ಅನಿವಾರ್ಯವಾಗಿ ಮುಂದಿನ ಹೋರಾಟದ ರೋಪು ರೇಷಗಳನ್ನ ಮಾಡಬೇಕಾಗುತ್ತದೆ ಎಂದರು.
ನಮ್ಮ ಹೋರಾಟ ಅನೇಕ ಕಡೆಗಳಲ್ಲಿ ಶಕ್ತಿ ಪ್ರದರ್ಶನ ಮಾಡಲಾಗಿದೆ. ಈಗಾಗಲೇ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಮೊದಲ ಹಂತದ್ದು ಯಶಸ್ವಿಯಾಗಿದೆ.ಆದರೆ ಏನಾದರೂ ಈ ಸಲ ಮುಖ್ಯಮಂತ್ರಿಗಳು ಸರಿಯಾಗಿ ಸಕಾರಾತ್ಮಕವಾಗಿ ಸ್ಪಂದಿಸದೇ ಹೋದರೆ ಉಗ್ರ ಸ್ವರೂಪದ ಹೋರಾಟ ಅನಿವಾರ್ಯ ಎಂದರು
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಅವರು ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪನೆಗೆ ತಮ್ಮ ಸಲಹೆ ಸೂಚನೆಗಳನ್ನು ಕೇಳಿದ್ದು ನಾನು ಮುಕ್ತವಾಗಿ ಕೊಟ್ಟಿದ್ದೇನೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜಿ ಜಿ ದ್ಯಾವನಗೌಡ್ರ್ ಶಶಿಶೇಖರ್ ಡಂಗನವರ ವಕೀಲರಾದ
ಶಂಕರಗೌಡ್ರ ನಾಗನಗೌಡ್ರ, ಗುರು ಕೆಲಗೇರಿ, ನಾಗರಾಜ ಗಂಜಿಗಟ್ಟಿ, ಶ್ರೀಕಾಂತ ಗುಳೇದ,
ಬಾಪೂಗೌಡ ಶಾಬಳದ,, ಶಶಿಧರ ಕೋಟಗಿ, ಚಂದ್ರು ಹೊಂಬಳ, ಎಮ್. ಎಮ್ ಹಳ್ಳಿ,. ಅನಿತಾ ಪಾಟೀಲ, ರತ್ನ ದಾನಮ್ಮನವರ, ವೈ. ಯು. ಮುದಿಗೌಡರ ಉಪಸ್ಥಿತರಿದ್ದರು.