ಹಳೆ ಹುಬ್ಬಳ್ಳಿಯಲ್ಲಿ ನಡೆದ ದಿಡ್ಡಿ ಹನುಮನ ದೇವಸ್ಥಾನ ಹಾಗೂ ಪೊಲೀಸ್ ಠಾಣೆ ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡಿದ ಮುಸ್ಲಿಮರ ಮೇಲೆ, ಇರತಕ್ಕಂತಹ ಕೇಸುಗಳನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ ಬಜರಂಗದಳ, ಘಟನೆಗೆ ಸಂಭಂದ ಪಟ್ಟವರನ್ನು ಶಿಕ್ಷಿಸುವುದನ್ನು ಬಿಟ್ಟು, ರಕ್ಷಿಸುತ್ತಿರುವ ಸರ್ಕಾರದ ತುಷ್ಟಿಕರಣದ ನೀತಯನ್ನು ತೀವ್ರವಾಗಿ ಖಂಡಿಸುವುದಲ್ಲದೆ , ಸರ್ಕಾರದ ಈ ನೀತಿಯಿಂದ ಈಡಿ ನಾಗರಿಕ ಸಮಾಜ ತಲೆ ತಗ್ಗಿಸುವಂಥ ಹಾಗೂ ನಾಚಿಕೆ ಪಡುವಂತಹದ್ದು, ಇದರ ವಿರುದ್ದ ಹೋರಾಟ ಮಾಡಲು ವಿಶ್ವ ಹಿಂದೂ ಪರಿಷತ ಬಜರಂಗದಳ ಸದಾ ಸಿದ್ದ ಇದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಕೂಡಲೇ ಸರ್ಕಾರ ತಮ್ಮ ನಿರ್ಣಯವನ್ನು ಹಿಂಪಡೆಯುವಂತೆ ಮಾನ್ಯ ತಹಶೀಲ್ದಾರ್ ಇವರ ಮುಖಾಂತರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ಪ್ರಶಾಂತ್ ನರಗುಂದ ಬಜರಂಗದಳ ಸಹ ಸಂಚಾಲಕ್ ಹುಬ್ಬಳ್ಳಿ ಮಹಾನಗರ, ಚೇತನ್ ರಾವ್ ವಿಶ್ವ ಹಿಂದೂ ಪರಿಷತ್ ಸಹ, ಕಾರ್ಯದರ್ಶಿಗಳು ಬಿ ಆರ್ ನಾಯಕ್, ಚಿದಾನಂದ ಶಂಕರ್ ಮಂಜು, ಧರ್ಮರಾಜ್, ಗಂಗಾಧರ್ ಸಂಗಮ್ ಶೆಟ್ಟರ್, ಬಜರಂಗದಳ ಸಂಚಾಲಕ್, ಹುಬ್ಬಳ್ಳಿ ಮಹಾನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು
ವರದಿ ಲೋಹಿತ ಬಸವಾ