Ad imageAd image

ಶರಣರ ಶಕ್ತಿ” ಚಿತ್ರ ನವೆಂಬರ್ ೨೨ ರಂದು ರಾಜ್ಯಾದ್ಯಂತ ಬಿಡುಗಡೆ

Hubballi Dhwani
ಶರಣರ ಶಕ್ತಿ” ಚಿತ್ರ ನವೆಂಬರ್ ೨೨ ರಂದು ರಾಜ್ಯಾದ್ಯಂತ ಬಿಡುಗಡೆ
WhatsApp Group Join Now
Telegram Group Join Now

ಹುಬ್ಬಳ್ಳಿ: ನ.೧೬ : ಉತ್ತರ ಕರ್ನಾಟಕದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ನಿರ್ಮಿಸಿ ನಿರ್ದೇಶಿಸಿದ ಶರಣರಶಕ್ತಿ ಚಲನ ಚಿತ್ರವು ಇದೇ ನವೆಂಬರ್ ೨೨ ರಂದು ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರ ನಿರ್ದೇಶಕ ದಿಲೀಪ ಶರ್ಮಾ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣ ಹಾಗೂ ಚಿನ್ಮಯ ಜ್ಞಾನಿ ಚನ್ನಬಸವಣ್ಣ ಅವರ ೧೨ ನೇ ಶತಮಾನದ ಸಮಾನತೆ ಸಾರುವ ಬಹು ನಿರೀಕ್ಷಿತ ಕನ್ನಡ ಚಲನ ಚಿತ್ರ “ಶರಣರ ಶಕ್ತಿ” ಬಿಡುಗಡೆಗೆ ಸಮಯ ನಿಗದಿಯಾಗಿದೆ.

ಕನ್ನಡ ಸಾಹಿತ್ಯ ಶ್ರೀಮಂತ ಗೊಳಿಸಲು ವಚನ ಸಾಹಿತ್ಯ ಬಹಳ ಮಹತ್ವ ಪಾತ್ರವಹಿಸಿದೆ ಶರಣರು ೧೨ನೇ ಶತಮಾನದಲ್ಲಿ ನಿತ್ಯ ಮಾತನಾಡುವ ಅಚ್ಚ ಕನ್ನಡದಲ್ಲಿಯೇ ವಚನಗಳನ್ನು ಬರೆದು ಹಾಗೂ ಸಮ ಸಮಾಜ ನಿರ್ಮಿಸಲು ಶ್ರಮಿಸಿದನ್ನು ಮರೆಯಲಾಗದು ಇಂತಹ ಶರಣರ ಕುರಿತು ಶರಣರ ಶಕ್ತಿ ಎಂಬ ಸಿನಿಮಾದ ಮೂಲಕ ಶರಣರ ಕ್ರಾಂತಿ ಶರಣರ ವಿಚಾರಗಳನ್ನ ಸಿನಿಮಾ ರೂಪದಲ್ಲಿ ತಮ್ಮ ಮುಂದೆ ಇಡಲಾಗಿದ್ದು, ತಾವರಲ್ಲರೂ ಚಿತ್ರ ವೀಕ್ಷಿಸಿ ಹಾರೈಸುವಂತೆ ಹೇಳಿದ್ದಾರೆ.

ಕನ್ನಡದ ಕನ್ನಡಿಯಂತಿರುವ ಈ ವಚನ ಸಾಹಿತ್ಯ ರಕ್ಷಣೆ ಇಂದಿನ ಅಗತ್ಯ ಹೆಚ್ಚಿದೆ ಶರಣರ ಶರಣರು ಜಗಜ್ಯೋತಿ ಬಸವೇಶ್ವರರ ಮುಂದಾಳತ್ವದಲ್ಲಿ ಅನುಭವ ಮಂಟಪ ಇಷ್ಟಲಿಂಗ ವಿಭೂತಿ ರುದ್ರಾಕ್ಷಿಗಳನ್ನು ಅರ್ಥೈಸುವ ಚಿತ್ರವೇ ಈ ಶರಣರ ಶಕ್ತಿ.

ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಡಾ. ಶ್ರುತಿ ಹೆಗಡೆ ಅವರು ಶರಣೆ ಸಂಕಮ್ಮನ ಪಾತ್ರ ಮಾಡಿ ಒಂದು ನೃತ್ಯವನ್ನು ಸಹಿತ ಮಾಡಿದ್ದಾರೆ. ಈ ಹಾಡು ಈಗಾಗಲೇ ವೀಕ್ಷಕರೆ ಮನಸ್ಸನ್ನು ಗೆದ್ದಿದೆ. ಮಾಜಿ ಶಾಸಕ, ರಂಗಕರ್ಮಿ ರಾಮಕೃಷ್ಣ ದೊಡ್ಡಮನಿ ಅವರು ಹರಳಯ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಮತಿ ವಿಶ್ವೇಶ್ವರ ಹಿರೇಮಠ ಕಲ್ಯಾಣಮ್ಮ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹುಬ್ಬಳ್ಳಿ ಮಹಾನಗರ ಪಾಲಿಕೆ ಸದಸ್ಯರಾದ ಚೇತನ್ ಹಿರೇಕೆರೂರು ಅವರು ಬಿಜ್ಜಳನ ಮಗನ ಪಾತ್ರದಲ್ಲಿ ನಟಿಸಿದ್ದಾರೆ .ಮೀನಾಕ್ಷಿ ಒಂಟಮೂರಿ ಅವರು ದಾನಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುರೇಶ್ ಗೋಕಾಕ್ ಅವರು ಮಲ್ಲಯ್ಯನ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಗುರುನಾಥ ಉಳ್ಳಿಕಾಶಿ ಅವರು ಮಾದಾರ ಚೆನ್ನಯ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಹೀಗೆ ಎಲ್ಲ ಜಿಲ್ಲೆಯ ಕಲಾವಿದರನ್ನು ಒಟ್ಟುಗೂಡಿಸಿ ಈ ಚಿತ್ರದಲ್ಲಿ ಒಂದೊAದು ಪಾತ್ರದಲ್ಲಿ ಅವರನ್ನು ಬಳಸಲಾಗಿದೆ.

ಬೆಂಗಳೂರಿನಿAದ ಹಿಡಿದು ಬೀದರವರೆಗಿನ ಹಲವು ಕಲಾವಿದರು ಪಾತ್ರ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು, ಟೀಸರ್ ಎಲ್ಲರ ಗಮನ ಸೆಳೆದಿದೆ . ಈ ಸಿನಿಮಾಕ್ಕೆ ಎಲ್ಲ ರಾಜಕೀಯ ವ್ಯಕ್ತಿಗಳು ಹಾಗೂ ಮಠಾಧೀಶರು ಶುಭ ಹಾರೈಸಿದ್ದಾರೆ.

ಇತ್ತಿಚೆಗೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಶರಣರ ಶಕ್ತಿ ಚಿತ್ರವನ್ನು ನಾಡಿನ ಹೆಸರಾಂತ ಶರಣರು, ಜಗದ್ಗುರುಗಳು, ಗಣ್ಯರು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಶರಣರು, ಅನುಭವ ಮಂಟಪ ಮತ್ತು ವಿಶ್ವಗುರು ಬಸವಣ್ಣ ಎನ್ನುವುದು ಎಷ್ಟು ಆಕರ್ಷಕವಾಗಿತ್ತು. ಇಂತಹ ಅಂಶಗಳನ್ನು ಸಂಶೋಧನೆ ನಡೆಸಿ ’ಶರಣರ ಶಕ್ತಿ’ ಎನ್ನುವ ಚಿತ್ರವೊಂದು ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಳಿಸಿದೆ.

ಶರಣರ ಶಕ್ತಿ ಚಲನ ಚಿತ್ರ ’ತಡಿವ್ಯರ ನೋಡು’ ಎಂಬ ಅಡಿಬರಹವಿದೆ. ಶರಣರನ್ನು ತಡುವಿದರೇ ಆಗುವ ಕ್ರಾಂತಿಗಳ ಕುರಿತು ಚಿತ್ರದಲ್ಲಿ ಉತ್ತಮವಾಗಿ ತೋರಿಸಲಾಗಿದೆ. ಪ್ರಚಾರದ ಮೊದಲ ಹಂತವಾಗಿ ’ಬಸವ ಜಯಂತಿ’ ಮುನ್ನ ದಿನದಂದು ಹಾಡು ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ಈಗಾಗಲೇ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಸಲಾಗಿದೆ.

ಶ್ರೀಷ ಫಿಲಂಸ್ ಅಡಿಯಲ್ಲಿ ಆರಾಧನಾ ಕುಲಕರ್ಣಿ ಬಂಡವಾಳ ಹೂಡುವ ಜತೆಗೆ ಅಕ್ಕ ನಾಗಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿ ಮನೋಜ್ಞ ಅಭಿನಯ ಮಾಡಿದ್ದಾರೆ. ಪದ್ಮ ವಿಭೂಷಣ ಡಾ.ರಾಜ್‌ಕುಮಾರ್ ಸಂಸ್ಥೆಯ ವಜ್ರೇಶ್ವರಿ ಕಂಬೈನ್ಸ್ದಲ್ಲಿ ಕೆಲಸ ಮಾಡಿ ಅಪಾರ ಅನುಬವ ಹೊಂದಿದ ದಿಲೀಪ್ ಶರ್ಮ ಸಿನಿಮಾಕ್ಕೆ ರಚನೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಶರಣ ಮಡಿವಾಳ ಮಾಚಿದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹನ್ನೆರಡನೇ ಶತಮಾನದಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಬಸವಣ್ಣನವರನ್ನು ಹುಡುಕಿಕೊಂಡು ಬಂದಿದ್ದರಿAದಲೇ ವಿಶ್ವಖ್ಯಾತಿಗೊಂಡರು. ಅವರು ಉತ್ತರ ಕರ್ನಾಟಕ ಭಾಗದವರು ಎಂಬುದು ಹೆಮ್ಮೆಯ ವಿಷಯವಾಗಿದೆ. ಯಾವ ಕಾರಣಕ್ಕೆ ಎಲ್ಲಾ ಶರಣರು ಅನುಭವ ಮಂಟಪಕ್ಕೆ ಬಂದರು. ಇಲ್ಲಿ ಮಹಾನ್ ಪುರುಷನ ಅವತಾರ ಹೇಗಿತ್ತು ಎಂಬುದನ್ನು ತಮ್ಮದೇ ವಿಶಿಷ್ಟ ಸಂಭಾಷಣೆ ಮೂಲಕ ತೆರೆಯಮೇಲೆ ತರುವ ಪ್ರಯತ್ನ ಚಿತ್ರ ನಿರ್ದೇಶಕ ದಿಲೀಪ ಶರ್ಮಾ ಮಾಡಿ ಸಪಲರಾಗಿದ್ದಾರೆ.

ಬಸವಣ್ಣನವರ ಕಲ್ಯಾಣ ಕ್ರಾಂತಿ, ವಚನ ಸಾಹಿತ್ಯ ರಕ್ಷಣೆ ಮಾಡಲು ಹೇಗೆ ಹೋರಾಡಿದರು. ಎಲ್ಲೆಲ್ಲಿ ವಚನಗಳನ್ನು ಬಚ್ಚಿಟ್ಟರು. ಅದನ್ನು ಜನರಿಗೆ ಯಾವ ರೀತಿ ಹರಡಿದರು. ವೇಶ್ಯೆ ಸಂಕವ್ವ ಮಹಾಶರಣೆಯಾಗಿದ್ದು. ತಳವಾರು ಕಾಮಿದೇವ ಶರಣರು ಯಾಕೆ ಕಲ್ಯಾಣಕ್ಕೆ ಬಂದರು. ಚನ್ನಬಸವಣ್ಣನ ಸಾರಥ್ಯದಲ್ಲಿ ಉಳಿವೆ ಮಂಟಪ. ಶರಣರನ್ನು ತಡೆ ಹಿಡಿದರೆ ಏನಾಗುತ್ತದೆ. ಇಂತಹ ಇನ್ನು ಹಲವಾರು ತಿಳಿಯದ ಮಾಹಿತಿಗಳು ಚಿತ್ರದಲ್ಲಿ ನೋಡಬಹುದಾಗಿದೆ.

ಉತ್ತರ ಕರ್ನಾಟಕ ಹುಬ್ಬಳ್ಳಿಯವರೆ ಆಗಿರುವ ಬಸವಣ್ಣನವರ ಪಾತ್ರ ಮಂಜುನಾಥಗೌಡ ಪಾಟೀಲ್, ನೀಲಾಂಬಿಕೆಯಾಗಿ ಸಂಗೀತಾ ಮಡ್ಲೂರ, ಶೀಲವಂತನಾಗಿ ವಿಶ್ವರಾಜ್ ರಾಜ್‌ಗುರು, ಚನ್ನಬಸವಣ್ಣನಾಗಿ ಧ್ರುವಶರ್ಮ, ಉಳಿದಂತೆ ರಮೇಶ್‌ಪಂಡಿತ್, ಸಾಚಿಜೈನ್, ವಿನೋದ್ ದಂಡಿನ, ರಾಮಕೃಷ್ಣ ದೊಡ್ಡಮನಿ, ಅಬ್ದುಲ್‌ಲತೀಫ್ ಹಾಗೂ ಉತ್ತರ ಕರ್ನಾಟಕ ಭಾಗದ ೧೪೦ಕ್ಕೂ ಹೆಚ್ಚು ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹುಬ್ಬಳ್ಳಿ ಸುತ್ತಮುತ್ತ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳನ್ನು ಹಾಪ್ ಟಿಲ್ ಮ್ಯುಜಿಕ್ (ಊoಠಿಣiಟ ಒusiಛಿ) ದಲ್ಲಿ ಕೇಳಿ ಆಲಿಸಬಹುದಾಗಿದೆ. ’ಹಲಗಿ’ ವಾದ್ಯ ಬಾರಿಸುವುದರಲ್ಲಿ ಹೆಸರು ಮಾಡಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿರುವ ಮುನಿವೆಂಕಟಪ್ಪ ಅವರು ಸಹ ಚಿತ್ರದಲ್ಲಿ ಬಣ್ಣಹಚ್ಚುವ ಮೂಲಕ ಕಾಣಿಸಿಕೊಂಡಿರುವುದು ವಿಷೇಶ.

ಚಿತ್ರಕ್ಕೆ ಸಂಗೀತ ಸಂಯೋಜನೆ ವಿನುಮನಸು, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ ಮಹಾಂತೇಶ್.ಆರ್ ನಿರ್ವಹಿಸಿದ್ದಾರೆ. ಬಹು ನಿರೀಕ್ಷಿತ ಶರಣರ ಶಕ್ತಿ ಚಿತ್ರವು ಇದೇ ನವೆಂಬರ್ ೨೨ ರಂದು ತೆರೆಗೆ ಬರಲಿದೆ. ಕನ್ನಡದ ಮನಸ್ದುಗಳು, ಅಭಿಮಾನಿಗಳು, ಕಲಾರಸಿಕರು, ಶರಣರ ಚಿತ್ರ ವಿಕ್ಷೀಸುವ ಮೂಲಕ ಪ್ರೋತ್ಸಾಹ ನಿಡುವಂತೆ ಕೋರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ದಿಲಿಪ ಶರ್ಮಾ, ಕುಂದುಗೋಳದ ಪೂಜ್ಯ ಶ್ರೀ ಬಸವಣ್ಣನಜ್ಜನವರು, ನಿರ್ಮಾಪಕಿ ಆರಾಧನಾ ಕುಲಕರ್ಣಿ, ನಟರಾದ ಮಂಜುನಾಥ್ ಗೌಡ ಪಾಟೀಲ್ ಡಾ. ಶ್ರುತಿ ಹೆಗಡೆ ಹಾಗೂ ಡಾ ಪ್ರಭು ಗಂಜಿಹಾಳ ಇತರರು ಪಾಲ್ಗೊಂಡಿದ್ದರು

WhatsApp Group Join Now
Telegram Group Join Now
Share This Article
error: Content is protected !!