Ad imageAd image

ಫ್ಲೈ ಒವರ್‌ನಿಂದ ರಾಡ್ ಬಿದ್ದ ಪ್ರಕರಣ; 16 ಜನರ ವಿರುದ್ಧ ಪ್ರಕರಣ ದಾಖಲು 

Hubballi Dhwani
ಫ್ಲೈ ಒವರ್‌ನಿಂದ ರಾಡ್ ಬಿದ್ದ ಪ್ರಕರಣ;  16 ಜನರ ವಿರುದ್ಧ ಪ್ರಕರಣ ದಾಖಲು 
WhatsApp Group Join Now
Telegram Group Join Now

ಫ್ಲೈ ಒವರ್‌ನಿಂದ ರಾಡ್ ಬಿದ್ದ ಪ್ರಕರಣ;

16 ಜನರ ವಿರುದ್ಧ ಪ್ರಕರಣ ದಾಖಲು 

ಹುಬ್ಬಳ್ಳಿ: ಪ್ರೈಓವ‌ರ್ ಕಾಮಗಾರಿಯ ಸಂದರ್ಭದಲ್ಲಿ ಪ್ರೈಓವರ್ ಮೇಲಿಂದ ರಾಡ್ ಬಿದ್ದು ಎಎಸ್‌ಐ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೈ ಓವರ್ ಕಾಮಗಾರಿಯ ಝಂಡು ಕನ್ಸ್ಟ್ರಕ್ಷನ್ ಎಂಡಿ ಸೇರಿ 16 ಜನರ ವಿರುದ್ಧ ದೂರು ದಾಖಲಾಗಿದೆ.

ಮಹಾರಾಷ್ಟ್ರ ಮೂಲದ ಝಂಡು ಕನ್‌ಸ್ಟ್ರಕ್ಷನ್ ವಿರುದ್ಧ
ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಮಂಗಳವಾರ ಸಂಜೆ 4 ಗಂಟೆಗೆ ಕೋರ್ಟ್ ವೃತ್ತದಲ್ಲಿ ಪ್ರೈ ಓವರ್ ಕಾಮಗಾರಿಯ ರಾಡ್ ಎಎಸ್‌ಐ ನಾಗರಾಜ್ ದಯಣ್ಣವರ ಮೇಲೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆ ನಾಭಿರಾಜ್ ಸಂಬಂಧಿಕರು ಉಪನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸುಮಾರು 320 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯು ನಡೆಯುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಹಿನ್ನೆಲೆ ಅವಘಡ ಸಂಭವಿಸಿದ ಆರೋಪ ಕೇಳಿ ಬಂದಿತ್ತು. ಸದ್ಯ ಸಂಬಂಧಿಕರ ದೂರಿನನ್ವಯ ಕಂಪನಿಯ ಎಂಡಿ ಸೇರಿ 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಗ್ಯ ವಿಚಾರಿಸಿದ ಸಚಿವ ಸಂತೋಷ್ ಲಾಡ್: ವಿಷಯ ತಿಳಿಯುತ್ತಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಆಸ್ಪತ್ರೆಗೆ ಭೇಟಿ ನೀಡಿ ನಾಗರಾಜ್ ಅವರ ಆರೋಗ್ಯ ವಿಚಾರಿಸಿದರು.

 

 

WhatsApp Group Join Now
Telegram Group Join Now
Share This Article
error: Content is protected !!