ಈ ವಿವಾದಕ್ಕೀಡಾದ ಲಾಂಛನ
ಬೆಂಗಳೂರು;ಸಾಹಿತ್ಯ ಸಮ್ಮೇಳನದಲಾಂಛನದಲ್ಲಿ ರಾಜ್ಯ ಸರ್ಕಾರಅಧಿಕೃತಗೊಳಿಸಿರುವ ನಾಡದೇವಿಯ ಚಿತ್ರವನ್ನು ಲಾಂಛನದಲ್ಲಿ ಬಳಸಿಕೊಂಡಿಲ್ಲ. ಜೊತೆಗೆ ಚರ್ತುಭುಜ ಇಲ್ಲವೇ ದ್ವಿಭುಜ ಇರುವ ದೇವಿಯ ಬದಲಿಗೆ ತ್ರಿಭುಜದ ದೇವಿಯ ಚಿತ್ರ ಬಳಸಿರುವ ಕುರಿತು ಆಕ್ಷೇಪ ವ್ಯಕ್ತವಾಗಿದೆ.
ಸಾಮಾನ್ಯವಾಗಿ ದೇವಿ ಚತುರ್ಭುಜ ಇಲ್ಲವೇ ದ್ವಿಭುಜ ರೂಪದಲ್ಲಿ ಇರಬೇಕು. ಆದರೆ, ಲಾಂಛನದಲ್ಲಿರುವ ದೇವಿ ಚಿತ್ರದಲ್ಲಿ ಮೂರುಕೈಗಳ ತ್ರಿಭುಜವಿದೆ. ಸಾಹಿತ್ಯ ಪರಿಷತ್ತು ಲಾಂಛನ ಬಿಡುಗಡೆಗೊಳಿಸುವ ಮುನ್ನ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಲಹೆ ಪಡೆಯಬೇಕಿತ್ತು ಎಂದು ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ಹೇಳಿದ್ದಾರೆ.
ಇಂತಹ ಸೂಕ್ಷ್ಮಗಳನ್ನು ಗಮನಿಸಿ ಲಾಂಛನ ರಚಿಸಬೇಕಿತ್ತು. ಹಾಗೆಯೇ ರಾಜ್ಯ ಸರ್ಕಾರ ಅಧಿಕೃತಗೊಳಿಸಿರುವ ಭುವನೇಶ್ವರಿ ದೇವಿಯ ಭಾವಚಿತ್ರ ಬಳಸಿಕೊಂಡಿದ್ದರೆ ಚೆನ್ನಾಗಿತ್ತು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಮತ್ತೊಮ್ಮೆ ಪರಿಶೀಲಿಸುವಂತೆ ತಿಳಿಸುತ್ತೇನೆ ಎಂದಿದ್ದಾರೆ.