ಕುಟುಂಬ ಸದಸ್ಯರನ್ನು ಕಾಣಲು, ಮದುವೆ, ಅನಾರೋಗ್ಯ ಚಿಕಿತ್ಸೆ ಅಥವಾ ವಿವಾಹವಾಗಲು ಪರೋಲ್ ನೀಡುವಂತೆ ಸಜಾ ಬಂಧಿ ಅಥವಾ ಅವರ ಕುಟುಂಬಸ್ಥರು ಕೋರುವುದು ಸರ್ವೇ ಸಾಮಾನ್ಯ. ಇಲ್ಲೊಂದು ವಿಶೇಷ ಹಾಗೂ ಅಪ ರೂಪದ ಪ್ರಕರಣದಲ್ಲಿ ಸಂತಾನ ಪಡೆಯುವ ಸಲುವಾಗಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿ ಸುತ್ತಿರುವ ತನ್ನ ಪತಿಯನ್ನು ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ವಿಶೇಷವೆಂದರೆ ಇದೇ ಮಹಿಳೆ ಪತಿಯನ್ನು ಪೆರೋಲ್ ಮೇಲೆ ಜೈಲಿಂದ ಬಿಡುಗಡೆ ಮಾಡಿ ಸಿಕೊಂಡು ಬಂದು ಮದುವೆಯಾಗಿದ್ದರು. ಇದೀಗ ಸಂತಾನ ಪಡೆಯಲು ಪತಿಗೆ 90 ದಿನಗಳ ಕಾಲ ಪೆರೋಲ್ ನೀಡಲು ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.