ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಬ್ಬಳ್ಳಿ ಮಹಾನಗರ ವತಿಯಿಂದ ನಡೆದ ಬೃಹತ್ ಪಥಸಂಚಲನಲ್ಲಿ ಸಾವಿರಾರು ರಾಷ್ಟ್ರಭಕ್ತ ಸ್ವಯಂಸೇವಕರೊಂದಿಗೆ ಪಾಲ್ಗೊಂಡೆನು. ಹುಬ್ಬಳ್ಳಿ ನೆಹರೂ ಮೈದಾನದಿಂದ, ಅಪ್ಸರಾ ಟಾಕೀಜ್ ಮಾರ್ಗವಾಗಿ ಸ್ಟೇಷನ್ ರೋಡ್ ಸಿಬಿಟಿ ಮಂಗಳವಾರ ಪೇಟ ಮಾರ್ಗವಾಗಿ ,ದುರ್ಗದ ಬೈಲ್ ರಸ್ತೆಯಾಗಿ ಸಾಗಿದ ಪಥಸಂಚಲನದುದ್ದಕ್ಕೂ ಸಾರ್ವಜನಿಕರು ಜೈಕಾರ ಹಾಗೂ ಹೂಮಳೆ ಚೆಲ್ಲುವ ಮೂಲಕ ರಾಷ್ಟ್ರ ಭಕ್ತರನ್ನು ಸ್ವಾಗತಿಸಿದ ಕ್ಷಣ ಅಭೂತಪೂರ್ವವಾದದ್ದು.
ರಾಷ್ಟ್ರೀಯ ವಿಚಾರಧಾರೆಯನ್ನು ದೇಶವಾಸಿಗಳಲ್ಲಿ ಬಿತ್ತರಿಸಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಸಮಾಜವನ್ನು ಒಗ್ಗೂಡಿಸುವ ಕಾರ್ಯ ನಡೆಸುತ್ತಿರುವ ಸಂಘವು ಜಗತ್ತಿನ ಅತಿ ದೊಡ್ಡ ಸಂಘಟನೆಯಾಗಿ ಬೆಳೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಸಂಘದ ಸ್ವಯಂಸೇವಕರಾಗಿ ನಾವೆಲ್ಲರೂ ಸಂಘದ ಭಾಗವಾಗಿ ರಾಷ್ಟ್ರ ಸೇವೆಯಲ್ಲಿ ಇನ್ನಷ್ಟು ಹೆಚ್ಚು ತೊಡಗಿಸಿಕೊಳ್ಳೋಣ ಎಂದು ಆಶಿಸುತ್ತೇನೆ.