ಹುಬ್ಬಳ್ಳಿ : ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ದೇಶಿತ ಆರ್ ಸಿಬಿ ( ರಾಯಣ್ಣ, ಚೆನ್ನಮ್ಮ ಬ್ರಿಗೇಡ್) ಸ್ಥಾಪನೆಯ ರೂಪು ರೇಷೆ ಕುರಿತಾಗಿ ಇಂದು ಹುಬ್ಬಳ್ಳಿಯ ಪಾಲಿಕೆ ಎದುರಿನ ಸ್ವಾತಿ ಹೊಟೆಲ್ನಲ್ಲಿ ಮಹತ್ವದ ಸಭೆ ನಡೆಸಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೆಡ್ನಲ್ಲಿಯೇ ಹೋರಾಟ ಮುಂದುವರಿಸಬೇಕಾ, ఆరో సిబి ರಚನೆ ಮಾಡಬೇಕಾ ಎಂಬ ಕುರಿತಂತೆ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಮಾಜಿ ಸಚಿವರು ಸೇರಿದಂತೆ 20 ಜಿಲ್ಲೆಗಳ 80ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು. ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ
ಸಂಸದ ವಿರೂಪಾಕ್ಷಪ್ಪ, ಉಡುಪಿ ಮಾಜಿ ಶಾಸಕ ರಘುಪತಿ ಭಟ್ , ಹುಬ್ಬಳ್ಳಿ ಪೂರ್ವದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಅಹಿಂದ ಮುಖಂಡ ಮುಕುಡಪ್ಪ, ಸಿದ್ದು ತೇಜಿ, ಈಶ್ವರಪ್ಪ ಅವರ ಪುತ್ರ ಕಾಂತೇಶ ಸೇರಿದಂತೆ ಅನೇಕ ಪ್ರಮುಖರು ಭಾಗಿಯಾಗಿದ್ದರು. ಸಭೆಯಲ್ಲಿ ಮುಂದಿನ ದಿನಗಳಲ್ಲಿ ಹಿಂದುಳಿದವರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಸಂಘಟನೆ ರೂಪು ರೇಷ ತಯಾರಿಸಲು ನಿರ್ಧರಿಸಲಾಯಿತು.