ನೇಹಾ ನಿವಾಸಕ್ಕೆ ಸಿಐಡಿ ಡಿಜಿಪಿ ಭೇಟಿ
ಹುಬ್ಬಳ್ಳಿ: ಮೃತ ನೇಹಾ ಹಿರೇಮಠ ಕೊಲೆಯಾದ ವಿದ್ಯಾನಗರದ ಬಿ.ವಿ.ಬಿ. ಕಾಲೇಜ್ ಆವರಣಕ್ಕೆ ಹಾಗೂ ಬಿಡ್ನಾಳದದ ಅವರ ನಿವಾಸಕ್ಕೆ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಭೇಟಿ ನೀಡಿ ಸ್ಥಳ ವೀಕ್ಷಿಸಿ ಮಾಹಿತಿ ಪಡೆದರು.
ನೇಹಾ ಮನೆಗೆ ಭೇಟಿ ನೀಡಿ ತಂದೆ ನಿರಂಜನ ಹಿರೇಮಠ ಹಾಗೂ ತಾಯಿ ಗೀತಾ ಹಿರೇಮಠ ಅವರ ಜೊತೆ ಚರ್ಚೆ ನಡೆಸಿದ ಡಿಜಿಪಿಯವರು ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೇ ವಿವರ ಪಡೆದು ಸೂಕ್ತವಾಗಿ ತನಿಖೆ ಮಾಡಿ ಆರೋಪಿ ಫಯಾಜ್‌ನಿಗೆ ಕಠಿಣ ಶಿಕ್ಷೆ ಕೊಡಿಸುವ ಆಶ್ವಾಸನೆ ನೀಡಿದರು.
ಎಪ್ರಿಲ್ ೧೮ ರಂದು ಬಿವಿಬಿ ಕಾಲೇಜ್‌ನಲ್ಲಿ ಫಯಾಜ್ ನಿಂದ ಹತ್ಯೆಗೊಳಗಾಗಿದ್ದ ನೇಹಾ ಪ್ರಕರಣ ಅಲ್ಲದೇ ಮೇ. ೧೫ರಂದು ನಡೆದ ಅಂಜಲಿ ಅಂಬಿಗೇರ ಎರಡೂ ಪ್ರಕರಣಗಳನ್ನು ಸಿಐಡಿ ಅಕಾರಿಗಳು ತನಿಖೆ ನಡೆಸುತ್ತಿದ್ದು ನಿನ್ನೆ ಆಗಮಿಸಿ ಇಲ್ಲಿನ ವಾಸ್ತವ ಮಾಹಿತಿ ಪಡೆದಿರುವ ಸಿಐಡಿ ಡಿಜಿಪಿ ಗ್ರಹ ಸಚಿವ ಡಾ. ಪರಮೇಶ್ವರ ಅವರಿಗೆ ಮಾಹಿತಿ ನೀಡಲಿದ್ದಾರೆ.